ನವದೆಹಲಿ,ಮೇ,11,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ತೈಲ ಅಭಾವದ ಸಂಕಷ್ಟ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೆಟ್ರೋ;ಲ್, ಡೀಸೆಲ್ ಅಡುಗೆ ಎಣ್ಣೆ ಮಿತವಾಗಿ ಬಳಕೆಗೆ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕುಟುಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇವು ಧರ್ಮೋಪದೇಶಗಳಲ್ಲ ವೈಫಲ್ಯದ ಪುರಾವೆಗಳಾಗಿವೆ. 12 ವರ್ಷಗಳಲ್ಲಿ ಮೋದಿ ದೇಶವನ್ನ ಈ ಸ್ಥಿತಿಗೆ ತಂದಿದ್ದಾರೆ. ಸಾರ್ವಜನಿಕರಿಗೆ ಏನು ಖರೀದಿಸಬೇಕು? ಏನು ಖರೀದಿಸಬಾರದು? ಎಲ್ಲಿಗೆ ಹೋಗಬೇಕು ಎಲ್ಲಿಗೆ ಹೋಗಬಾರದು ಎಂದು ಮೋದಿ ಹೇಳುತ್ತಾರೆ.
ಪ್ರತಿ ಬಾರಿಯೂ ಮೋದಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಮೇಲೆ ಜವಾಬ್ದಾರಿ ಹೊರಿಸುತ್ತಾರೆ. ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಚಾಟಿ ಬೀಸಿದ್ದಾರೆ.
Key words: Rahul Gandh, PM Modi, moderate, use, petrol, diesel







