Wednesday, August 12, 2026

BDA Apartments

Home Cinema ‘ಶಿವಾಜಿ ಸುರತ್ಕಲ್’ ನೋಡಿ ಥ್ರಿಲ್ ಆದ ರಾಹುಲ್ ದ್ರಾವಿಡ್

‘ಶಿವಾಜಿ ಸುರತ್ಕಲ್’ ನೋಡಿ ಥ್ರಿಲ್ ಆದ ರಾಹುಲ್ ದ್ರಾವಿಡ್

ಬೆಂಗಳೂರು, ಫೆಬ್ರವರಿ 19, 2020 (www.justkannada.in): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಇಂದು ಸುರತ್ಕಲ್ ಸಿನಿಮಾ ವೀಕ್ಷಿಸಿದ್ದಾರೆ.

ರಿಲೀಸ್ ಗೂ ಮುಂಚೆ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದ್ರಾವಿಡ್ ಭಾಗಿಯಾಗಿದ್ದರು.

ಹೌದು. ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’ ಸಿನಿಮಾ ಇದೇ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಇದೀಗ, ಸಿನಿಮಾ ಬಿಡುಗಡೆಗೂ ಮುಂಚೆಯೇ ವಿಶೇಷ ವ್ಯಕ್ತಿಯೊಬ್ಬರು ಸಿನಿಮಾ ನೋಡಿದ್ದಾರೆ.

ಈ ಖುಷಿಯನ್ನ ಸ್ವತಃ ರಮೇಶ್ ಅರವಿಂದ್ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರ ಕ್ರೈಂ ಥ್ರಿಲ್ಲಿಂಗ್ ಕಥಾಹಂದರವನ್ನು ಹೊಂದಿದೆ.