Saturday, August 8, 2026

BDA Apartments

Home Front Page ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ.

ಮುಂಬೈ,ನವೆಂಬರ್,29,2023(www.justkannada.in):  ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಮರು ಆಯ್ಕೆಯಾಗಿದ್ದು ಈ ಮೂಲಕ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ವಿಶ್ವಕಪ್ ನಲ್ಲಿ  ಭಾರತ ತಂಡ ಅದ್ಬುತವಾಗಿ ಪ್ರದರ್ಶನ ನೀಡಿ ಬಳಿಕ  ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲನುಭವಿಸಿದ ನಂತರ ಮುಖ್ಯಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯಬಹುದೆಂದು ಎಂಬ ಊಹಾಪೂಹಗಳು ಹಬ್ಬಿದ್ದವು. ಆದರೆ ಇದೀಗ  ಮಹತ್ವದ ಘೋಷಣೆ ಮಾಡಿರುವ ಬಿಸಿಸಿಐ, ರಾಹುಲ್ ದ್ರಾವಿಡ್  ಅವರನ್ನು ಮುಖ್ಯ ಕೋಚ್ ಆಗಿ ಮರು ಆಯ್ಕೆ ಮಾಡಿದೆ.

ವಿಶ್ವಕಪ್ ಫೈನಲ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿತ್ತು. ಅಂದಿನಿಂದ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಗುತ್ತದೆ ಎಂದು ಹೇಳಲಾಗುತ್ತು. ಆದರೆ ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ, ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಮುಂದುವರೆಸಿದೆ.

Key words: Rahul Dravid – re-elected – head coach – Indian cricket team.