Wednesday, August 19, 2026

BDA Apartments

Home Cinema ಲವ್ ಮಾಕ್’ಟೇಲ್-2 ಕಥೆ ಕೇಳಿ ಥ್ರಿಲ್ ಆದ ರಘು ದೀಕ್ಷಿತ್

ಲವ್ ಮಾಕ್’ಟೇಲ್-2 ಕಥೆ ಕೇಳಿ ಥ್ರಿಲ್ ಆದ ರಘು ದೀಕ್ಷಿತ್

ಬೆಂಗಳೂರು, ಜೂನ್ 05, 2020 (www.justkannada.in): ಲವ್ ಮಾಕ್ ಟೇಲ್-1 ಯಶಸ್ವಿ ಬೆನ್ನಲ್ಲೇ ಲವ್ ಮಾಕ್ಟೆಲ್-2ಗೆ ಬರದ ಸಿದ್ಧತೆ ನಡೆಯುತ್ತಿದೆ.

ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೇಳಿದ್ದಾರೆ. ಚಿತ್ರದ ಯಶಸ್ಸಿನ ಬೆನ್ನಲೇ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್‍ಟೇಲ್ ಸಿನಿಮಾದ ಸಿಕ್ವೇಲ್ ಮಾಡುವುದಾಗಿ ಹೇಳಿಕೊಂಡಿದ್ದರು.

ಈಗ ಲಾಕ್‍ಡೌನ್ ಸಮಯದಲ್ಲಿ ಈ ಚಿತ್ರದ ಕಥೆಯನ್ನು ಕೃಷ್ಣ ರೆಡಿ ಮಾಡಿದ್ದಾರೆ. ಲವ್ ಮಾಕ್‍ಟೇಲ್ ಚಿತ್ರಕ್ಕೆ ರಘು ದೀಕ್ಷಿತ್ ಅವರು ಸಂಗೀತ ನೀಡಿದ್ದರು. ಇದೇ ತಂಡವನ್ನು ಇಟ್ಟಿಕೊಂಡು ಕೃಷ್ಣ ಲವ್ ಮಾಕ್‍ಟೇಲ್-2 ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ.