Wednesday, August 19, 2026

BDA Apartments

Home Front Page ನಟ ದರ್ಶನ್ ಪ್ರಚಾರಕ್ಕೆ ಬಂದ ವೇಳೆ ಅಡ್ಡಗಾಲು ಹಾಕಿ ಬಳಿಕ ಶರಣಾಗಿದ್ದ ಬಸವ ಸಾವು….

ನಟ ದರ್ಶನ್ ಪ್ರಚಾರಕ್ಕೆ ಬಂದ ವೇಳೆ ಅಡ್ಡಗಾಲು ಹಾಕಿ ಬಳಿಕ ಶರಣಾಗಿದ್ದ ಬಸವ ಸಾವು….

ಮೈಸೂರು,ಜೂ,5,2020(www.justkannada.in): ಕೆ ಆರ್ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಕೊನೆಗೂ ಇಂದು ಬೆಳಗ್ಗೆ ಮೃತಪಟ್ಟಿದೆ. ಒಂದು ತಿಂಗಳಿಂದ ಚಿಂತಾಜನಕ‌ ಸ್ಥಿತಿಯಲ್ಲದ್ದ ಬಸವ. ಗ್ರಾಮದ ಅಚ್ಚುಮೆಚ್ಚಿನ ದೇವರು, ಯುವಕರಿಗೆ ಗೆಳೆಯನಾಗಿದ್ದ ಬಸವ.

ಕಳೆದ ಮಂಡ್ಯ ಲೋಕಸಭಾ ಚುನಾವಣಾ ವೇಳೆಯಲ್ಲಿ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಹೋಬಳಿ ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ಸಂಸದೆ ಸುಮಲತಾ ಅವರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಚಿತ್ರನಟ ದರ್ಶನ್ ಅವರ ಜೀಪ್ ಮುಂದೆ  ಹೋಗದಂತೆ ಅಡ್ಡಗಾಲು ಹಾಕಿ ಗ್ರಾಮದ ಬಸವ ನಿಂತಿತ್ತು. ನಂತರ ದರ್ಶನ್ ತಾವೇ ಸ್ವತಃ ಜೀಪ್ ನಿಂದ ಇಳಿದು ಬಸವನ ಮೈ ಸವರಿದಾಗ ಮುಂದೆ ಹೋಗಲು ಅವಕಾಶ ಮಾಡಿ ಕೊಟ್ಟಿತ್ತು. ನಂತರ ದರ್ಶನ್  ಅವರು ಮುಂದಿನ  ಬಿಡುವು ದಿನಗಳಲ್ಲಿ ಬಂದು ಬಸವನ ಹಾರೈಕೆ‌ ಮಾಡುವುದಾಗಿ ತಿಳಿಸಿದ್ದರು.Actor- Darshan-K.R nagar- basava- death

ಈ ಸುದ್ದಿ ಬಾರಿ ವೈರಲ್ ಆಗಿತ್ತು, ಕಳೆದ ಒಂದು ತಿಂಗಳಿಂದ  ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಚಿಂತಾಜನಕ ಸ್ಥಿತಿಯಲ್ಲಿತ್ತು. ಇಂದು ಬೆಳಗ್ಗೆ ಕಾಳಮ್ಮನ ದೇವಸ್ಥಾನದ ಆವರಣದಲ್ಲಿ ಮೃತಪಟ್ಟಿದೆ. ಕೊನೆಗೂ ಬಸವನ ಬೇಟಿ ಚಿತ್ರನಟ ಧರ್ಶನ್ ಬರಲೇ ಇಲ್ಲ. ಅಂತಿಮ ದರ್ಶನಕ್ಕಾದರೂ ದರ್ಶನ್ ಬರುತ್ತಾರ ಎಂದು ಗ್ರಾಮಸ್ಥರ ಮನವಿಯಾಗಿದೆ.

Key words: Actor- Darshan-K.R nagar- basava- death