Saturday, August 22, 2026

BDA Apartments

Home Front Page ಬೇರೆ ರಾಜ್ಯದ ಚುನಾವಣೆಗಾಗಿ ಕರ್ನಾಟಕದಲ್ಲಿ ಲೂಟಿ: ಸರ್ಕಾರದ ವಿರುದ್ದ ರಾಧಾಮೋಹನ್ ದಾಸ್ ಆರೋಪ

ಬೇರೆ ರಾಜ್ಯದ ಚುನಾವಣೆಗಾಗಿ ಕರ್ನಾಟಕದಲ್ಲಿ ಲೂಟಿ: ಸರ್ಕಾರದ ವಿರುದ್ದ ರಾಧಾಮೋಹನ್ ದಾಸ್ ಆರೋಪ

ಬೆಂಗಳೂರು,ಫೆಬ್ರವರಿ,19,2026 (www.justkannada.in):  ಬೇರೆ ರಾಜ್ಯಗಳ ಚುನಾವಣೆಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಬೇರೆ ರಾಜ್ಯಗಳ ಚುನಾವಣೆಗಳಿಗೆ ಕರ್ನಾಟಕದಿಂದಲೇ ಹಣ ರವಾನೆಯಾಗುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಆರೋಪಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ರಾಧಾಮೋಹನ್ ದಾಸ್,  ಈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಈ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದಾರೆ. 2023ರಲ್ಲಿ ನಮ್ಮ ಕೆಲವು ತಪ್ಪುಗಳಿಂದ ಕಡಿಮೆ ಸೀಟು ಬಂದವು.  ರಾಜ್ಯದಲ್ಲಿ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಒಟ್ಟಾಗಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡುತ್ತೇವೆ.  ನಮ್ಮಲ್ಲೂ ಗೊಂದಲ ಇದೆ. ಆದರ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನಡುವೆ ಇರುವಷ್ಠು ಸಂಘರ್ಷ ನಮ್ಮಲ್ಲಿ ಇಲ್ಲ.  ನಮ್ಮ ತಂಡ ಬಲಿಷ್ಠವಾಗಿದೆ. ಇದೇ ತಂಡದ ನೇತೃತ್ವದಲ್ಲಿ ಮುಂದೆ ಮತ್ತೆ ಗೆದ್ದು ಬರುತ್ತೇವೆ.  ಮುಂದಿನ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುತ್ತೇವೆ ಎಂದರು.

ಕಾಂಗ್ರೆಸ್ ಮುಸ್ಲೀಮರ ಪರ ಇದೆ. ಮುಸ್ಲೀಮರ ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ದ ಅನೇಕ ಮೊಕದ್ದಮೆಗಳಿವೆ.  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರಾದ ಜಮೀರ್ ಅಹ್ಮದ್ ಖಾನ್ ಈಶ್ವರ್ ಖಂಡ್ರೆ ಮೇಲೆ ಅನೇಕ ಕೇಸ್ ಗಳಿವೆ. ವಕ್ಫ್ ಹೆಸರಲ್ಲಿ ಹಿಂದೂಗಳ ಆಸ್ತಿ ಕಬಳಿಸುವ ಕೆಲಸ ನಡೆಯುತ್ತಿದೆ.  ಈ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ರಾಧಾಮೋಹನ್ ದಾಸ್ ತಿಳಿಸಿದರು.

Key words: Radha Mohan Das, Karnataka government, looting, elections