‘ಪಂಕಜ ಕಸ್ತೂರಿ’ಯಾಗಿ ಬರ್ತಿದ್ದಾರೆ ಡಿಂಪಲ್ ಕ್ವೀನ್ ರಚಿತಾ !

ಮೈಸೂರು, ನವೆಂಬರ್ 14, 2020 (www.justkannada.in): ದೀಪಾವಳಿ ಹಬ್ಬದ ಪ್ರಯುಕ್ತ ನಟಿ ರಚಿತಾ ರಾಮ್ ನಟನೆಯ ‘ಪಂಕಜ ಕಸ್ತೂರಿ’ ಸಿನಿಮಾದ ಫೋಸ್ಟರ್ ರಿಲೀಸ್ ಮಾಡಲಾಗಿದೆ.

ಮಯೂರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಚಿತಾ ರಾಮ್ ಟೈಟಲ್ ಫೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಪ್ರಕಟಣೆ ಟೈಟಲ್ ಹೇಳಿದ್ಮೇಲೆ 1st ಲುಕ್ ಬಿಡ್ದೆ ಇದ್ರೆ ಹೆಂಗೇ? ನಾನು ‘ಪಂಕಜ ಕಸ್ತೂರಿ’ಯಾಗಿ ನಿಮ್ಮುಂದೆ ಬರ್ತಿದೀನಿ.

ನಿಮ್ಮ ಮನೆ ಮನಸ್ಸಿಗೆ ಬರ ಮಾಡ್ಕೊಳ್ಳಿ ದೀಪಾವಳಿಯನ್ನ ಸೆಲೆಬ್ರೇಟ್ ಮಾಡ್ಕೋಳಿ. ಎಲ್ರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ರಚಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.