ಮೈಸೂರು, ಸೆ.15,2025: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ನಗರದ ಯಾದವಗಿರಿ ಪ್ರದೇಶದಲ್ಲಿರುವ ಪ್ರಸಿದ್ಧ ಕನ್ನಡಿಗ-ಇಂಗ್ಲಿಷ್ ಕಾದಂಬರಿಕಾರ ಆರ್.ಕೆ. ನಾರಾಯಣ್ (1906–2001) ಅವರು ವಾಸಿಸಿದ್ದ ಮನೆ ಈಗ ಪ್ರವಾಸಿ ತಾಣಗಳೆಂದು ಗುರುತಿಸಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ರಾಜ್ಯದ 1275 ಪಾರಂಪರಿಕ ಕಟ್ಟಡಗಳನ್ನ ಗುರುತಿಸಿ ಅವುಗಳನ್ನು ಪ್ರವಾಸಿ ತಾಣವೆಂದು ಘೋಷಿಸಿ ಅವುಗಳ ಅಭಿವೃದ್ಧಿಗೆ ಅಗತ್ಯಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಿದೆ. ಈ ಪಟ್ಟಿಯಲ್ಲಿ ಮೈಸೂರಿನ ಯಾದವಗಿರಿಯಲ್ಲಿರುವ ಆರ್.ಕೆ.ನಾರಾಯಣ್ ಮನೆ ಸಹ ಒಂದು.
ದಶಕದ ಹಿಂದೆ (2011) ಅಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ C.G.ಬೆಟಸೂರ ಮಠ ಅವರ ದೂರದೃಷ್ಠಿಯ ಫಲವಾಗಿ ಈ ಕಟ್ಟಡಕ್ಕೆ ಪಾರಂಪರಿಕ ಮಾನ್ಯತೆ ಲಭಿಸಿ ಇಂದು ಪ್ರವಾಸಿ ತಾಣವೆಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಈ ಬಗ್ಗೆ ಬೆಟಸೂರ ಮಠ ಅವರನ್ನು “ಜಸ್ಟ್ ಕನ್ನಡ “ ಮಾತನಾಡಿಸಿತು.
ಈ ಮನೆ 1952ರಲ್ಲಿ ಕಟ್ಟಲ್ಪಟ್ಟಿದ್ದು, ಆರ್.ಕೆ. ನಾರಾಯಣ್ ಅವರು ಹಲವಾರು ವರ್ಷಗಳ ಕಾಲ ಇಲ್ಲಿ ವಾಸಿಸಿದ್ದರು. ಅವರೇ ಸೃಷ್ಟಿಸಿದ ಪ್ರಸಿದ್ಧ ಮಾಲ್ಗುಡಿ ಪಟ್ಟಣದ ಹಲವಾರು ಕೃತಿಗಳು ಇಲ್ಲಿಯೇ ಬರೆಯಲ್ಪಟ್ಟವು.
ನಾರಾಯಣ್ ಅವರ ನಿಧನದ ನಂತರ ಮನೆ ಹಾಳಾಗುವ ಹಂತಕ್ಕಿತ್ತು. ಜತೆಗೆ ಕುಟುಂದವರು (ಮೊಮ್ಮಗಳು ಭುವನೇಶ್ವರಿ) ಈ ಕಟ್ಟಡ ಮಾರಾಟ ಮಾಡಲು ಮುಂದಾಗಿದ್ದರು. ಸೇಲ್ ಅಗ್ರೀಮೆಂಟ್ ಸಹ ಮಾಡಿಕೊಳ್ಳಲಾಗಿತ್ತು. ಆದರೆ ಖಾತೆ ಇನ್ನು ಆಗಿರಲಿಲ್ಲ. ಅಷ್ಟರಲ್ಲಾಗಲೇ ಮನೆ ಖರೀದಿಸಿದ್ದಾತ ಅದನ್ನು ಜೆಸಿಬಿ ಸಹಾಯದಿಂದ ಕೆಡವಲು ಆರಂಭಿಸಿದ್ದ. ಇದು ಮೈಸೂರಿನ ಮಾಧ್ಯಮಗಳಲ್ಲಿ ಅಂದು ದೊಡ್ಡ ಸುದ್ಧಿಯಾಯಿತು. ಕೂಡಲೇ ಎಚ್ಚೆತ್ತುಕೊಂಡು ಈ ಬಗ್ಗೆ ಅಂದಿನ ಬಿಜೆಪಿ ಸರಕಾರದಲ್ಲಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ಗಮನಕ್ಕೆ ತರಲಾಯಿತು. ಅವರು ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ಕಟ್ಟಡ ಉಳಿಸಲು ನೆರವಾದರು.
ಮೈಸೂರು ನಗರಾಭಿವೃದ್ಧಿ ಆಯುಕ್ತ (ಮುಡಾ) ನಾಗಿದ್ದ ನಾನು, ಕಟ್ಟಡ ಉಳಿಸುವ ಸಲುವಾಗಿ ಅದನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿದೆ. ಆ ಮೂಲಕ ಕಟ್ಟಡ ಕೆಡವದಂತೆ ತಡೆಯುವಲ್ಲಿ ಯಶಸ್ವಿಯಾದೆ. ಆನಂತರ ಬಳಿಕ ನಾನು ನಗರ ಪಾಲಿಕೆ ಆಯುಕ್ತನಾಗಿ ನೇಮಕಗೊಂಡೆ. ಆಗ ಮೈಸೂರು ಮಹಾನಗರ ಪಾಲಿಕೆ (MCC) ಮತ್ತು ಸರ್ಕಾರದ ನೆರವಿನಿಂದ 2.33 ಕೋಟಿ ರೂ. ಹಣ ಪಾವತಿಸಿ ( 1.93 ಕೋಟಿ ರೂ. ನಿವೇಶನ ಮತ್ತು ಕಟ್ಟಡ ಹಾಗೂ 40 ಲಕ್ಷ ರೂ. ಸಂರಕ್ಷಣೆ) ಕಟ್ಟಡವನ್ನು ಖರೀದಿ ಮಾಡಿದೆವು. ಬಳಿಕ ಕೆಡವಿದ್ದ ಭಾಗವನ್ನು ಪುನರ್‌ನಿರ್ಮಾಣ ಮಾಡಿ ಕಟ್ಟಡ ಸಂರಕ್ಷಿಸಿ 2016ರಲ್ಲಿ “ ಮ್ಯೂಸಿಯಂ “ ಆಗಿ ಸಾರ್ವಜನಿಕರಿಗೆ ತೆರೆಯಲಾಯಿತು.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಲೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಈ ಮ್ಯೂಸಿಯಂ ಉದ್ಘಾಟಿಸಿದ್ದು ಅವರೇ ಎಂದು C.G.ಬೆಟಸೂರ ಮಠ ಹಳೆ ಸಂಗತಿ ಮೆಲುಕು ಹಾಕಿದರು.
ಮ್ಯೂಸಿಯಂ ವಿಶೇಷತೆಗಳು:
ಆರ್.ಕೆ. ನಾರಾಯಣ್ ಅವರ ವೈಯಕ್ತಿಕ ವಸ್ತುಗಳು – ಬಟ್ಟೆಗಳು, ಬಳಸುತ್ತಿದ್ದ ಪೆನ್‌ಗಳು, ಫರ್ನಿಚರ್, ಅಡುಗೆ ಉಪಕರಣಗಳು. ಅವರ ಲೇಖನ ಪ್ರಕ್ರಿಯೆ ತೋರಿಸುವ ಸ್ಟಡಿ ರೂಂ (ಬರಹದ ಮೇಜು, ಕುರ್ಚಿ). ಕೃತಿಗಳ ಮೊದಲ ಆವೃತ್ತಿ ಪುಸ್ತಕಗಳು, ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳು. ಮಾಲ್ಗುಡಿ ಡೇಸ್ ಧಾರಾವಾಹಿ ಹಾಗೂ ಅವರ ಸಹೋದರ ಆರ್.ಕೆ. ಲಕ್ಷ್ಮಣ್ ಅವರ ಚಿತ್ರಣಗಳು. ಅವರ ಬದುಕಿನ ಫೋಟೋ ಗ್ಯಾಲರಿಗಳನ್ನು ಒಳಗೊಂಡಿದೆ.
ಜತೆಗೆ ಚೆನ್ನೈನ ನಿವಾಸಲ್ಲಿದ್ದ ಆರ್.ಕೆ.ನಾರಾಯಣ್ ಅವರಿಗೆ ಲಭಿಸಿದ ಪ್ರಶಸ್ತಿ ಫಲಕಗಳು, ಬಳಸುತ್ತಿದ್ದ ವಸ್ತುಗಳನ್ನು ಸಹ ಅಲ್ಲಿಂದ ತಂದು ಅವುಗಳನ್ನು ಅದದೇ ಕೋಣೆಯಲ್ಲಿ ಇರಿಸಲಾಗಿದೆ ಎಂದು ಬೆಟಸೂರ ಮಠ ಮಾಹಿತಿ ಹಂಚಿಕೊಂಡರು.
key words: The result of this officer’s vision is now the novelist R.K. Narayan House is a “tourist destination”.
R.K. Narayan, “tourist destination”. Betsurmath,MUDA, Mysore
SUMMARY:
The result of this officer’s vision is now the novelist R.K. Narayan House is a “tourist destination”.
A decade ago (2011), thanks to the foresight of Betsurmath, the then Commissioner of the Mysore Urban Development Authority, this building was granted heritage recognition and is now recognized as a tourist destination.
This house was built in 1952 and R.K. Narayan lived here for several years. Many of his works about the famous Malgudi town he created were written here.