Sunday, August 9, 2026

BDA Apartments

Home Front Page ಭಿಕ್ಷುಕರಂತೆ ಟಿಕೆಟ್ ಪಡೆದು ಗೆದ್ದು ಈಗ ಮೋಸ ಮಾಡಿದ್ದಾರೆ-ಆರ್.ಅಶೋಕ್ ಕಿಡಿ

ಭಿಕ್ಷುಕರಂತೆ ಟಿಕೆಟ್ ಪಡೆದು ಗೆದ್ದು ಈಗ ಮೋಸ ಮಾಡಿದ್ದಾರೆ-ಆರ್.ಅಶೋಕ್ ಕಿಡಿ

ನವದೆಹಲಿ,ಜೂನ್,23,2026 (www.justkannada.in):  ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರ ವಿರುದ್ದ ಕೆಂಡಾಮಂಡಲರಾಗಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಭಿಕ್ಷುಕರಂತೆ ಟಿಕೆಟ್ ಪಡೆದು ಗೆದ್ದು ಈಗ ಮೋಸ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ  ನಬಿನ್ ಅವರನ್ನ ಭೇಟಿಯಾಗಲು ದೆಹಲಿಗೆ ತೆರಳಿರುವ ಆರ್.ಅಶೋಕ್, ಅಡ್ಡಮತದಾನದ ಬಗ್ಗೆ  ಮಾತನಾಡಿ,  ಪಕ್ಷಕ್ಕೆ ಮೋಸ ಮಾಡಿದವರನ್ನ ಕ್ಷಮಿಸಲು ಆಗಲ್ಲ  ಭಿಕ್ಷುಕರಂತೆ ಟಿಕೆಟ್ ಪಡೆದು ಗೆದ್ದು ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್  ನವರು ಊರಿಗೆಲ್ಲಾ ಬುದ್ದಿ ಹೇಳುತ್ತಾರೆ. ದುಡ್ಡು ಕೊಟ್ಟು ಬೆದರಿಸಿ ವೋಟ್ ಹಾಕಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದ ಕೂಡಲೇ ಭ್ರಷ್ಟಾಚಾರ ಶುರು ಮಾಡಿದ್ದಾರೆ. ಇನ್ನು ಧರ್ಮಸ್ಥಳದ ವಿಚಾರ ಇನ್ನೂ ಅಂತಿಮವಾಗಿಲ್ಲ ಎಂದು ಆರ್.ಅಶೋಕ್ ತಿಳಿಸಿದರು.

Key words: cross, voting, cheated, R. Ashok