ತಲಕಾವೇರಿಯಲ್ಲಿ ಮಾಸ್ಕ್ ಹಾಕಿ ಎಂದಿದ್ದಕ್ಕೆ ಕೇರಳ ಪುಂಡರಿಂದ ಹಲ್ಲೆ 

ಕೊಡಗು,ನವೆಂಬರ್,16,2020(www.justkannada.in) : ಜಿಲ್ಲೆಯ ತಲಕಾವೇರಿಯಲ್ಲಿ ಮಾಸ್ಕ್ ಹಾಕುವಂತೆ ಹೇಳಿದಕ್ಕೆ ರೊಚ್ಚಿಗೆದ್ದ ಯುವಕರ ಗುಂಪು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಎಂಬುವವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಡ ರಾತ್ರಿ ನಡೆದಿದೆ.

kannada-journalist-media-fourth-estate-under-loss

ಕೇರಳದ ಪುಂಡರಿಂದ ದಾಂದಲೆ

ಪ್ರವಾಸಕ್ಕೆಂದು ಬಂದಿದ್ದ ಕೇರಳದ ಯುವಕರು ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ, ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರ ಮೇಲೇ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನು ಕೇಳಲು ಹೋದ ಭಕ್ತಾದಿ ರಾಕೇಶ್ ದೇವಯ್ಯ ಅವರ ಕೈ ಬೆರಳನ್ನು ಕೇರಳದ ಪುಂಡರು ಮುರಿದಿದ್ದಾರೆ.

ತಡರಾತ್ರಿ ಹತ್ತು ಮಂದಿ ಪುಂಡರ ವಿರುದ್ಧ ಕೇಸ್

ಪುಂಡರ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಂದಲೆ ನಿರತ ಯುವಕರನ್ನು ವಶಕ್ಕೆ ಪಡೆದು ತಡರಾತ್ರಿ ಹತ್ತು ಮಂದಿ ಪುಂಡರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Put,mask,Talacauvery,Assaulted,Kerala,scoundreldom

key words : Put-mask-Talacauvery-Assaulted-Kerala-scoundreldom