ಗುಡ್ ನ್ಯೂಸ್ ! ಕೆಎಸ್’ಆರ್’ಟಿಸಿ ನೌಕರರ 2 ತಿಂಗಳ ವೇತನ ಬಿಡುಗಡೆ

ಬೆಂಗಳೂರು, ನವೆಂಬರ್ 16, 2020 (www.justkannada.in): ರಾಜ್ಯ ರಸ್ತೆ ಸಾರಿಗೆ ನೌಕರರ 2 ತಿಂಗಳ ಬಾಕಿ ವೇತನವನ್ನು ಸರಕಾರ ಬಿಡುಗಡೆ ಮಾಡಿದೆ.

ಬಾಕಿ ವೇತನವನ್ನು ಬಿಡುಗಡೆಗೆ ಸಿಎಂ ಸೂಚನೆ ನೀಡಿದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಈ ಕ್ರಮ ವಹಿಸಿದೆ. ಈ ಮೂಲಕ ಈ ಮೂಲಕ ಸಾರಿಗೆ ನೌಕರರಿಗೆ ದೀಪಾವಳಿ ದಿನದಂದು ಗುಡ್ ನ್ಯೂಸ್ ನೀಡಿದೆ.

ಸಾರಿಗೆ ಇಲಾಖೆಯ ನೌಕರರಿಗೆ ಕೊರೋನೋ ಸೋಂಕಿನ ಸಂಕಷ್ಟದಿಂದಾಗಿ ವೇತನ ಬಿಡುಗಡೆ ಮಾಡಿರಲಿಲ್ಲ. ಇಂತಹ ನೌಕರರು ದೀಪಾವಳಿಯಂದೇ ಸಂಕಷ್ಟಕ್ಕೆ ಒಳಗಾಗಿದ್ದರು.

ಹೀಗಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ನೌಕರರು ಭೇಟಿ ಮಾಡಿ, ಚರ್ಚೆ ನಡೆಸಿದರು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಡಿಸಿಎಂ ಲಕ್ಷ್ಮಣ್ ಸವದಿ, ಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳು ಬಾಕಿ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಹೀಗಾಗಿ ಸಾರಿಗೆ ಇಲಾಖೆಗೆ 634 ಕೋಟಿ ರಿಲೀಸ್ ಮಾಡಲಾಗಿದೆ. ಇದರಿಂದ ನೌಕರರ 2 ತಿಂಗಳ ಬಾಕಿ ವೇತನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.