Thursday, September 3, 2026

BDA Apartments

Home Cinema ಪತ್ನಿ ಜತೆ ಕಾಡು ಸುತ್ತುತ್ತಿರುವ ಪವರ್ ಸ್ಟಾರ್ !

ಪತ್ನಿ ಜತೆ ಕಾಡು ಸುತ್ತುತ್ತಿರುವ ಪವರ್ ಸ್ಟಾರ್ !

ಬೆಂಗಳೂರು, ನವೆಂಬರ್ 10, 2020 (www.justkannada.in): ಪಕ್ಕಾ ಪರಿಸರ ಪ್ರೇಮಿಯ ಅವತಾರ ತಾಳಿದ್ದಾರೆ ಪವರ್ ಸ್ಟಾರ್ ಅಪ್ಪು !

ಹೌದು. ಆದರೆ ಇದು ರೀಲ್ ಅಲ್ಲ ರಿಯಲ್. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶೂಟಿಂಗ್ ನಡುವೆ ತಮಗೆ ಸಿಕ್ಕ ಸಣ್ಣ ಬಿಡುವಿನ ವೇಳೆ ಸದುಪಯೋಗಕ್ಕೆ ಮುಂದಾಗಿದ್ದಾರೆ.

ಪತ್ನಿ ಅಶ್ವಿನಿ, ಸ್ನೇಹಿತರೊಂದಿಗೆ ಉತ್ತರ ಕರ್ನಾಟಕದ ಜೋಯಿಡಾ ವನ್ಯ ಜೀವಿ ವಲಯಕ್ಕೆ ಭೇಟಿ ನೀಡಿದ್ದಾರೆ ಪುನೀತ್. ಕ್ಯಾಮರಾ ಹಿಡಿದುಕೊಂಡು ಪಕ್ಕಾ ಪರಿಸರ ಪ್ರೇಮಿಯ ಅವತಾರ ತಾಳಿದ್ದಾರೆ.

ಇಲ್ಲಿನ ಜನರೊಂದಿಗೆ ಬೆರೆತು, ಇಲ್ಲಿನ ವನ್ಯ ಜೀವಿಗಳ ಬಗ್ಗೆ ತಿಳಿದುಕೊಂಡು ಖುಷಿಯಿಂದ ಕಾಲಕಳೆದಿದ್ದಾರೆ. ಮೊನ್ನೆಯಷ್ಟೇ ಪುನೀತ್ ದಾಂಡೇಲಿ ಗುಡ್ಡಗಾಡು ಪ್ರದೇಶದಲ್ಲಿ ನೆಲದಲ್ಲಿ ಕೂತು ಸಾಮಾನ್ಯರಂತೇ ಕೂತು ಊಟ ಮಾಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು.