ಮೈಸೂರು ನಗರ ಪಾಲಿಕೆ ಬಜೆಟ್ ತಯಾರಿಕೆ ಕುರಿತು ನಾಳೆ ಸಾರ್ವಜನಿಕ ಸಮಾಲೋಚನಾ ಸಭೆ…

 ಮೈಸೂರು, ಜನವರಿ,12,2021(www.justkannada.in): ಮೈಸೂರು ನಗರ ಪಾಲಿಕೆಯ 2021-22 ನೇ ಸಾಲಿನ ಆಯವ್ಯಯ ತಯಾರಿಸಲು ನಾಗರೀಕರು ಮತ್ತು ಸಂಘ ಸಂಸ್ಥೆಗಳ  ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು  ಸಾರ್ವಜನಿಕ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.jk-logo-justkannada-mysore

ನಾಳೆ  ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ  ಸಮಾಲೋಚನೆ ಸಭೆಯನ್ನು  ನಡೆಯಲಿದೆ.public-meeting-mysore-city-corporation-budget-preparation-tomorrow

ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಾರ್ವಜನಿಕರು ಆಗಮಿಸಿ ಈ ಸಾಂಸ್ಕೃತಿಕ ನಗರಿಯ ಸರ್ವತೋಮುಖ ಅಭಿವೃದ್ಧಿಗೆ ಅಮೂಲ್ಯ ಸಲಹೆಗಳನ್ನು ನೀಡಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Public –meeting-Mysore city corporation- budget –preparation- tomorrow