Saturday, August 8, 2026

BDA Apartments

Home Front Page ನಾಳೆ ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದು

ನಾಳೆ ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದು

ಮೈಸೂರು, ಸೆಪ್ಟೆಂಬರ್ 25, 2022 (www.justkannada.in): ನಾಳೆ (ಸೆ.26ರಂದು) ರಾಷ್ಟ್ರಪತಿಯವರ ದಸರಾ ಉದ್ಘಾಟನ ಕಾರ್ಯಕ್ರಮ ಹಿನ್ನೆಲೆ: ಸಾರ್ವಜನಿಕರಿಗೆ ದೇವರ ದರ್ಶನ ನಿರ್ಬಂಧ ವಿಧಿಸಲಾಗಿದೆ.

ಸೆಪ್ಟಂಬರ್ 26 ರಂದು ಚಾಮುಂಡಿ ಬೆಟ್ಟದಲ್ಲಿ  ರಾಷ್ಟ್ರಪತಿಯವರ ಮೈಸೂರು ದಸರಾ ಉಧ್ಘಾಟನ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 11.30 ಗಂಟೆ ಕೆಲವು ಗಂಟೆಗಳವರೆಗೆ ಸಾರ್ವಜನಿಕರಿಗೆ ಚಾಮುಂಡೇಶ್ವರಿ ದೇವಸ್ಧಾನದಲ್ಲಿ ದೇವರ ದರ್ಶನ ನಿರ್ಬಂಧವಿದೆ.

ಅಂದು ರಾಷ್ಟ್ರಪತಿಯವರ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಬಹುದಾಗಿದೆ ಹಾಗೂ ಕಾರ್ಯಕ್ರಮ ಮುಗಿದ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು  ಎಂದು ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.