ಮಂಗಳೂರಿನಲ್ಲಿ ಹಿಂಸಾಚಾರ ಪ್ರಕರಣ: ಪ್ರಚೋದನೆ ನೀಡಿದ ಆರೋಪದಡಿ ವ್ಯಕ್ತಿ ಬಂಧನ…

 

ಮಂಗಳೂರು,ಜ,3,2020(www.justkannada.in):  ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಡಿ ಪ್ರಚೋದನೆ ನೀಡಿದ ಆರೋಪದ ಮೇಲೆ ವ್ಯಕ್ತಿಯನ್ನ ಮಂಗಳೂರು ಸೈಬರ್ ಕ್ರೈಮ್

ಪೋಲಿಸರು ಬಂಧಿಸಿದ್ದಾರೆ.  ಟೋಪಿ ಸಿದ್ದಿಕ್(48) ಬಂಧಿತ ಆರೋಪಿ. ಬಂಧಿತ ಆರೋಪಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಅಫ್ಘನ್ ಹಿಂಸಾಚಾರ ಫೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ  ಪ್ರಚೋದನೆ ನೀಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸರು ಟೋಪಿ ಸಿದ್ಧಕ್ ನನ್ನ ಬಂಧಿಸಿದ್ದಾರೆ.

Key words:  protest-violence – Mangalore- Arrest- person -accused