ಹೊಸ ವರ್ಷಾಚರಣೆ ವೇಳೆ ಅತಿಯಾದ ಮದ್ಯ ಸೇವನೆ : ಅಸ್ವಸ್ಥನಾಗಿದ್ದ ಕಾನೂನು ವಿದ್ಯಾರ್ಥಿ ಸಾವು….

ಮೈಸೂರು,ಜ,2,2020(www.justkannada.in): ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಅತಿಯಾದ ಮದ್ಯಸೇವಿಸಿ ಅಸ್ವಸ್ಥಗೊಂಡಿದ್ದ ಕಾನೂನು ವಿಧ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಎರಡನೇ ಈದ್ಗಾ ನಿವಾಸಿ  ಕಾರ್ತಿಕ್ (22) ಮೃತ ದುರ್ದೈವಿ. ವಿದ್ಯಾವರ್ಧಕ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಕಾರ್ತಿಕ್. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೂವರು ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದನು. ಈ ವೇಳೆ ಕಾರ್ತಿಕ್ ಅತಿಯಾಗಿ ಮದ್ಯ ಸೇವನೆ ಮಾಡಿದ್ದನು ಎನ್ನಲಾಗಿದೆ.

ಮದ್ಯಸೇವನೆ ಯಿಂದ ತೀವ್ರ ಅಸ್ವಸ್ಥನಾಗಿ ಕಾರ್ತಿಕ್ ಆಸ್ಪತ್ರೆಗೆ ದಾಖಲಾಗಿದ್ದ.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ತಡರಾತ್ರಿ ಕಾರ್ತಿಕ್  ಸಾವನ್ನಪ್ಪಿದ್ದಾನೆ.  ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  alcohol -New Year-death law student -mysore