Tuesday, September 1, 2026

BDA Apartments

Home Front Page ವಾಲ್ಮಿಕಿ  ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆ: ಮೆಟ್ರೋದಲ್ಲಿ ಪ್ರಯಾಣಿಸಿದ ಸಚಿವ ಡಿ.ಕೆ ಶಿವಕುಮಾರ್…

ವಾಲ್ಮಿಕಿ  ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆ: ಮೆಟ್ರೋದಲ್ಲಿ ಪ್ರಯಾಣಿಸಿದ ಸಚಿವ ಡಿ.ಕೆ ಶಿವಕುಮಾರ್…

ಬೆಂಗಳೂರು,ಜೂ,25,2019(www.justkannada.in): ವಾಲ್ಮಿಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ವಾಲ್ಮಿಕಿ ಸಂಘಟನೆಗಳು  ಧರಣಿ ನಡೆಸುತ್ತಿದ್ದು, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ.

ಹೌದು, ಮೀಸಲಾತಿಗೆ ಆಗ್ರಹಿಸಿ ವಿಧಾನಸೌಧದ ಎದುರು ವಾಲ್ಮಿಕಿ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆ ವಿಧಾನಸೌಧದ ಎದುರಿನ ರಸ್ತೆ ಸುತ್ತಮುತ್ತ, ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ರಸ್ತೆ ಬಂದ್ ಆಗಿದ್ದು ಈ ವೇಳೆ ಕೋರ್ಟ್ ಗೆ ತೆರಳುತ್ತಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪ್ರತಿಭಟನೆ ಬಿಸಿ ತಟ್ಟಿದೆ.

ಪ್ರತಿಭಟನೆ ಟ್ರಾಫಿಕ್ ಜಾಮ್ ಹಿನ್ನೆಲೆ ಸಚಿವ ಡಿಕೆ ಶಿವಕುಮಾರ್ ಮೆಟ್ರೋದಲ್ಲಿ ಪ್ರಯಾಣಿಸಿದರು. ತಮ್ಮ ವಿರುದ್ದದ ಪ್ರಕರಣವೊಂದರ ಸಂಬಂಧ ಶಿವಕುಮಾರ್‌ ಇಂದು ನ್ಯಾಯಾಲಯಕ್ಕೆ ಹಾಜರಾಗಲೇಬೇಕಿದ್ದ ಕಾರಣ ವಿಧಾನಸೌಧದಿಂದ ಸೆಂಟ್ರಲ್ ಕಾಲೇಜ್‌ ವರೆಗೆ ಮೆಟ್ರೋ ರೈಲಿನಲ್ಲಿ ಶಿವಕುಮಾರ್ ತೆರಳಿದ್ದಾರೆ.

Key words:   protest- demanding- reservation -Minister DK Sivakumar- metro.