Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಹೈಕಮಾಂಡ್ ಮೆಚ್ಚಿಸಲು ಕಾಂಗ್ರೆಸ್ ನಿಂದ ಪ್ರತಿಭಟನೆ- ಸಚಿವ ಎಸ್.ಟಿ ಸೋಮಶೇಖರ್ ಟೀಕೆ.

ಹೈಕಮಾಂಡ್ ಮೆಚ್ಚಿಸಲು ಕಾಂಗ್ರೆಸ್ ನಿಂದ ಪ್ರತಿಭಟನೆ- ಸಚಿವ ಎಸ್.ಟಿ ಸೋಮಶೇಖರ್ ಟೀಕೆ.

ಮೈಸೂರು,ಜೂನ್,14,2022(www.justkannada.in):  ಜಾರಿನಿರ್ದೇಶನಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಹೈಕಮಾಂಡ್ ಮೆಚ್ಚಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ನಿಜ.  ಪ್ರಾಮಾಣಿಕವಾಗಿದ್ದರೇ ಭಯ ಯಾಕೆ..?  ಅಕ್ರಮ ಎಸಗಿದ್ದರೇ ಮಾತ್ರ ಭಯವಾಗುತ್ತದೆ.

ಇಡಿ ವಿಚಾರಣೆ ರಾಜಕೀಯ ಪ್ರೇರಿತ ತನಿಖೆ ಅಲ್ಲ. ಇವರ ನಡೆ ನೋಡಿದರೇ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಶಂಕೆ ವ್ಯಕ್ತಪಡಿಸಿದ್ದಾರೆ.

Key words: Protest – Congress – High Command – Minister -ST Somashekhar