ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ವಿರೋಧಿಸಿ ಪ್ರತಿಭಟನೆ.

ಮೈಸೂರು,ಮಾರ್ಚ್,8,2022(www.justkannada.in): ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ  ಮುಂದಾದ ಸರ್ಕಾರದ ನಡೆಯನ್ನ ಖಂಡಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ ನಡೆಸಿತು.

ಚಾಮುಂಡಿಬೆಟ್ಟದ ತಪ್ಪಲಿನ ಬಳಿ ಪ್ರತಿಭಟ ನಡೆಸುವ ಮೂಲಕ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ರೋಪ್ ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಚಾಮುಂಡಿ ಬೆಟ್ಟಕ್ಕೆ ಸಾಕಷ್ಟು ಮಾರ್ಗಗಳು ಇವೆ. ಸರ್ಕಾರ ಹಣ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಅರಣ್ಯ ಸಂಪತ್ತು ಹಾಳು ಮಾಡಲು ಹೊರಟಿದೆ. ರೋಪ್ ವೇ ನಿರ್ಮಾಣದಿಂದ ಸಾವಿರಾರ ಮರಗಳು, ಕಾಡು ನಾಶ ಆಗಲಿದೆ. ಪ್ರಾಕೃತಿಕ ಸೌಂದರ್ಯವುಳ್ಳ ಚಾಮುಂಡಿ ಬೆಟ್ಟದ ಹಾಳು ಮಾಡುವುದು ಬೇಡ. ಯಾವುದೇ ಕಾರಣಕ್ಕೂ ಸರ್ಕಾರ ಈ ಯೋಜನೆ ಜಾರಿ ಮಾಡದಂತೆ ಪ್ರತಿಭಟನಾಕಾರರು  ಒತ್ತಾಯಿಸಿದರು.

Key words: Protest against – ropeway -Chamundi hill

ENGLISH SUMMARY…

Protest against construction of rope way to Chamundi hills
Mysuru, March 8, 2022 (www.justkannada.in): Members of the Mysuru Kannada Vedike led a protest against the Government of Karnataka’s project to construct a ropeway to Chamundi hills in Mysuru.
The protestors staged a demonstration at the foothills of Chamundi. There are so many other ways to reach the top of Chamundi hill. The State Government is implementing this project only to make money. It is about destroying forest property in the name of tourism development. Thousands of trees and forest property will be lost from this project. The beauty of the Chamundi hills is at stake. We request to stop this project, the protestors demanded.
Keywords: Chamundi hills/ rope way/ protest