ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವಿಚಾರ: ತಕ್ಷಣವೇ  ಹಿಂಸಾಚಾರ  ನಿಲ್ಲಿಸಬೇಕು-ಸುಪ್ರೀಂಕೋರ್ಟ್ ಎಚ್ಚರಿಕೆ…

ನವದೆಹಲಿ,ಡಿ,16,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ  ಹಿಂಸಾಚಾರ ಹಿನ್ನೆಲೆ,  ತಕ್ಷಣವೇ  ಹಿಂಸಾಚಾರ  ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ,  ಪಿಐಎಲ್ ತುರ್ತು ವಿಚಾರಣೆ ನಿರಾಕರಿಸಿರುವ ಸುಪ್ರೀಂಕೋರ್ಟ್, ತಕ್ಷಣವೇ  ಹಿಂಸಾಚಾರ  ನಿಲ್ಲಿಸಬೇಕು. ನಾವು ಯಾವುದೇ ಅಧಿಕಾರದ ವಿರುದ್ದ ಅಲ್ಲ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಸಹಿಸಲ್ಲ. ಹಿಂಸಾಚಾರ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ  ನವದೆಹಲಿಯಲ್ಲಿ,ಅಲಿಗಢ, ಹೈದರಾಬಾದ್ ಮತ್ತು ಕೋಲ್ಕತ್ತಾದ ವಿಶ್ವವಿದ್ಯಾಲಯಗಳಲ್ಲಿ ರಾತ್ರಿಯಿಡೀ ಪ್ರತಿಭಟನೆ ಮುಂದುವರಿದಿತ್ತು.

Key words: Protest- against -Citizenship Amendment Act- Violence – stopped- immediately – Supreme Court.