ಮೈಸೂರು ಅರಮನೆ ಆವರಣದಲ್ಲಿ ಮೂಡಲಿದೆ ‘ಬೆಂಗಳೂರು ಪ್ಯಾಲೇಸ್’ ! ಮಾಗಿ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಸಾಂಸ್ಕೃತಿಕ ನಗರದಲ್ಲಿ ಮಾಗಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ.

ಅರಮನೆ ಅವರಣದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದತೆ ಭರದಿಂದ ನಡೆಯುತ್ತಿದೆ. ಅರಮನೆ ಅವರಣದಲ್ಲಿ ನಿರ್ಮಾಣವಾಗಲಿದೆ ಬೆಂಗಳೂರು ಅರಮನೆ ಮಾದರಿ ನಿರ್ಮಾಣವಾಗುತ್ತಿದೆ.

ನಾನಾ ಬಗೆಯ ಹೂ ಗಳಿಂದ ಬೆಂಗಳೂರು ಅರಮನೆ ಮಾದರಿ ನಿರ್ಮಾಣ ಮಾಡಲಾಗುತ್ತಿದ್ದು, ಹೂ ಗಳಿಂದ ವಿವಿಧ ಕಲಾ ಕೃತಿಗಳ ತಯಾರಿಗೆ ಸಿದ್ದತೆ ನಡೆದಿದೆ.

ಗುಲಾಬಿ ,ಚೆಂಡು ಹೂಗಳಿಂದ ಸಿಂಗಾರಗೊಳ್ಳಲಿದೆ ಅರಮನೆ ಅವರಣ. ಪ್ರತಿ ವರ್ಷದಂತೆ ಈ ವರ್ಷವೂ ನೂತನ ಮಾದರಿಗಳ ಪ್ರದರ್ಶನ ನಡೆಯಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಅರಮನೆ ಮಂಡಳಿ ಸಿಬಂದ್ದಿಯಿಂದ ಸಿದ್ದತೆ ನಡೆದಿದೆ.