ಕಾವೇರಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧ ಹಾಗೂ ಯುವಕನ ರಕ್ಷಣೆ.

ಮೈಸೂರು,ಆಗಸ್ಟ್,16,2021(www.justkannada.in):  ಕಾವೇರಿ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ವೃದ್ಧ ಹಾಗೂ ಯುವಕನ್ನು ಮೈಸೂರಿನ ಗಿರಿ ಮಂಜು ಎಂಬುವವರು ರಕ್ಷಣೆ ಮಾಡಿದ್ದಾರೆ.

ಕೊಣನೂರಿನ ಕಾವೇರಿ ಹೊಳೆಯಲ್ಲಿ ನೆನ್ನೆ ಸಂಜೆ ಈ ಘಟನೆ ನಡೆದಿದೆ. ಚಿಕ್ಕ ಅರಕಲಗೂಡಿನ  ದಾಸೆಗೌಡ್ರು(94)  ಹಾಗೂ ಹಾಸನದ ನವೀನ (23) ಇಬ್ಬರನ್ನ ರಕ್ಷಣೆ ಮಾಡಲಾಗಿದೆ. ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನನ್ನು ರಕ್ಷಿಸಲು ನದಿಗೆ ಹಾರಿದ ಯುವಕನೂ ಅಪಾಯದಲ್ಲಿ ಸಿಲುಕಿದ್ದ.

ಇದೇ ಸಮಯದಲ್ಲಿ  ತೂಗುಸೇತುವೆ ಬಳಿ ಛಾಯಚಿತ್ರ ತೆಗೆಯುತ್ತಿದ್ದ ಮೈಸೂರಿನ ಗಿರಿಮಂಜು ಸಾರ್ವಜನಿಕರ ಕೂಗಾಟ ಕಂಡು ಸ್ಥಳಕ್ಕೆ ಧಾವಿಸಿದ್ದರು. ನಂತರ ಕಾವೇರಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಇಬ್ಬರನ್ನ ರಕ್ಷಿಸಿ ಬಳಿಕ ಕೊಣನೂರು ಪೊಲೀಸರಿಗೆ ಮಾಹಿತಿ  ನೀಡಿದ್ದಾರೆ.

Key words: Protection – old man- young – Kaveri- river