Thursday, August 13, 2026

BDA Apartments

Home Front Page ವೇಶ್ಯೆಯರ ರೀತಿ ಕೆಲವರು ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿಗೆ ಹೋದರು-ಬಿ.ಕೆ ಹರಿಪ್ರಸಾದ್ ತೀವ್ರ ವಾಗ್ದಾಳಿ.

ವೇಶ್ಯೆಯರ ರೀತಿ ಕೆಲವರು ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿಗೆ ಹೋದರು-ಬಿ.ಕೆ ಹರಿಪ್ರಸಾದ್ ತೀವ್ರ ವಾಗ್ದಾಳಿ.

ಹೊಸಪೇಟೆ,ಜನವರಿ,17,2023(www.justkannada.in): ಸಮ್ಮಿಶ್ರ ಸರ್ಕಾರದ ವೇಲೆ ಕಾಂಗ್ರೆಸ್ ಜೆಡಿಎಸ್ ಬಿಟ್ಟು ಬಿಜೆಪಿಗೆ ಹೋದ 17 ಶಾಸಕರ ವಿರುದ್ದ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿಯಾತ್ರೆಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, ಹೊಟ್ಟೆ ಪಾಡಿಗಾಗಿ ತನ್ನ ಮೈಮಾರಿಕೊಂಡವರನ್ನ ವೇಶ್ಯೆಯರು ಎನ್ನುತ್ತೇವೆ . ಮ್ಮನ್ನ ತಾವು ಮಾರಿಕೊಂಡ ಶಾಸಕರನ್ನ ಏನಂತೀರಾ.?  ವೇಶ್ಯೆಯರ ರೀತಿ ಕೆಲವರು ಶಾಸಕ ಸ್ಥಾನ ಮಾರಿಕೊಂಡರು. ವೇಶ್ಯಯರ ಮಾದರಿಯಲ್ಲಿ ತಮ್ಮ ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದರು.

ಇದೊಂದು ಭ್ರಷ್ಟಾಚಾರದ ಸರ್ಕಾರ. ಮೋದಿ ಒಬ್ಬರು ಸುಳ್ಳಿನ ಸರದಾರ. ಕರ್ನಾಟಕ ರೋಗಗ್ರಸ್ತ ರಾಜ್ಯವನ್ನಾಗಿಸಿದ ಕೀರ್ತಿ ಬಿಜೆಪಿಗೆ ಸಲ್ಲತ್ತದೆ ಎಂದು ಕಿಡಿ ಕಾರಿದರು.

Key words: prostitutes, – sold -their – MLA-seat- BJP – BK Hariprasad