Sunday, September 20, 2026

BDA Apartments

Home Front Page ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಮತ್ತೊಬ್ಬರಿಲ್ಲ- ಕೇಂದ್ರ ಸಚಿವ ವಿ. ಸೋಮಣ್ಣ

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಮತ್ತೊಬ್ಬರಿಲ್ಲ- ಕೇಂದ್ರ ಸಚಿವ ವಿ. ಸೋಮಣ್ಣ

ಬೆಂಗಳೂರು,ಆಗಸ್ಟ್,17,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಸನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರೇ ಇತ್ತ ಕೇಂದ್ರ ಸಚಿವ ವಿ. ಸೋಮಣ್ಣ  ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ಹೌದು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಮತ್ತೊಬ್ಬರಿಲ್ಲ ಸಿದ್ದರಾಮಯ್ಯ ಬುದ್ದಿವಂತ, ನುರಿತ ರಾಜಕಾರಣಿ. ಏನು ಮಾಡಬೇಕೆಂದು ಸಿದ್ದರಾಮಯ್ಯ ಸಾಹೇಬ್ರಿಗೆ ಗೊತ್ತು ಎಂದಿದ್ದಾರೆ.

ನಾನು ಅವರು ಬಹಳ ಆತ್ಮೀಯವಾಗಿ ಕೆಲಸ ಮಾಡಿದ್ದೇವೆ.  ನಿನ್ನೆನೂ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ.  ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ ಕಾನೂನು ಏನು ಹೇಳುತ್ತೋ ಅದು ಆಗುತ್ತೆ ಎಂದು ಸೋಮಣ್ಣ ತಿಳಿಸಿದ್ದಾರೆ.

Key words: prosecution, CM, Siddaramaiah, Central Minister, V.Somanna