ಎಲ್ಲಾ ಯೋಜನೆಗಳಿಗೆ ಒಂದೇ ಕುಟುಂಬದ ಹೆಸರು ಯಾಕೆ..? – ಮಾಜಿ ಸಚಿವ ಸಿ.ಟಿ ರವಿ ಟೀಕೆ.

ಬೆಂಗಳೂರು,ಆಗಸ್ಟ್,16,2021(www.justkannada.in): ಇತ್ತೀಚೆಗೆ ಕಾಂಗ್ರೆಸ್ ಕಚೇರಿಯಲ್ಲಿ ಬೇಕಿದ್ದರೇ ನೆಹರು ಹುಕ್ಕಾಬಾರ್ ತೆರೆಯಲಿ ಎಂದು ಹೇಳಿಕೆ  ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ಇದೀಗ ಮತ್ತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಈ ದೇಶ ಒಂದು ಕುಟುಂಬದ ಆಸ್ತಿಯಲ್ಲ. ಎಲ್ಲಡೆ ಯೋಜನೆಗಳಿಗೆ ಒಂದೇ ಕುಟುಂಬದ ಹೆಸರು ಇಟ್ಟಿದ್ದಾರೆ. ಇವರನ್ನ ಬಿಟ್ಟು  ಬೇರೆ ಯಾರು ಹೋರಾಟ ಮಾಡಿಲ್ಲವಾ..? ಎಲ್ಲಾ ಯೋಜನೆಗಳಿಗೆ ಒಂದೇ ಕುಟುಂಬದ ಹೆಸರು ಯಾಕೆ..? ಎಂದು ಮಾಜಿ ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿ.ಟಿ ರವಿ, ನಾನು ಸಿದ್ಧರಾಮಯ್ಯನಷ್ಟು ಬುದ್ಧಿವಂತನಲ್ಲ. ದೇಶದ ವಿಚಾರದಲ್ಲಿ ರಾಜಿಯಾಗಲ್ಲ. ನಾನು ದೇಶದ ಹಿತಕ್ಕಾಗಿ ಚಿಂತನೆ ಮಾಡುತ್ತೇನೆ.  ಈ ದೇಶ ಒಂದು ಕುಟುಂಬದ ಆಸ್ತಿಯಲ್ಲ ಎಂದರು.

ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ, ಎಂ.ಪಿ ಕುಮಾರಸ್ವಾಮಿ ಬಹಳ ಬುದ್ಧಿವಂತರ ಸೂಕ್ಷ್ಮವಾಗಿ ವ್ಯವಹರಿಸುತ್ತಾರೆ ಎಂದರು.

Key words:  projects same -family- name-Former Minister -CT Ravi