Sunday, August 9, 2026

BDA Apartments

Home Front Page ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ.

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ.

ಚಾಮರಾಜನಗರ,ಸೆಪ್ಟಂಬರ್,3,2022(www.justkannada.in): ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ ಭಾರಿ ವಾಹನಗಳ ಸಂಚಾರಕ್ಕೆ  ನಿಷೇಧ ವಿಧಿಸಲಾಗಿದೆ.

ಆರು ಚಕ್ರ ಮೇಲ್ಪಟ್ಟ ವಾಹನಗಳಿಗೆ ಸಂಪೂರ್ಣ ನಿಷೇಧ ವಿಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತ ಸೋಮಲ್  ಆದೇಶ ಹೊರಡಿಸಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೆ  ಈ ಆದೇಶ ಅದೇಶ  ಅನ್ವಯವಾಗಲಿದೆ.

ಅಗತ್ಯ ವಸ್ತುಗಳ ಸಾಗಾಣಿಕೆ ಸರ್ಕಾರಿ, ಖಾಸಗಿ ಬಸ್ ಗಳು, ಲಘ ಪ್ಯಾಸೆಂಜರ್ ವಾಹನಗಳಿಗೆ ವಿನಾಯಿತಿ  ನೀಡಲಾಗಿದೆ.  ರಾತ್ರಿ ವೇಳೆ ಭಾರಿ ವಾಹನಗಳು ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುತ್ತಿದ್ದವುತಿರುವುಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದ ಹಿನ್ನಲೆ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

Key words: Prohibition – heavy vehicle – night – Male Mahadeshwar Hill.