ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪ್ರೊ. ಪುರುಷೋತ್ತಮ ಬಿಳಿಮನೆ ವಿವಾದಾತ್ಮಕ ಹೇಳಿಕೆ

ಮೈಸೂರು,ನವೆಂಬರ್,19,2025 (www.justkannada.in): ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಯಕ್ಷಗಾನದ ಒಳಗೆ ಎಷ್ಟೋ ಬಾರಿ ಸಲಿಂಗಕಾಮ (ಹೋಮೊಸೆಕ್ಸ್) ಬೆಳೆಯುತ್ತದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ  ಪ್ರೊ. ಪುರುಷೋತ್ತಮ ಬಿಳಿಮನೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯ ಪ್ರಸಾರಂಗದಲ್ಲಿ ಧರೆಗೆ ದೊಡ್ಡವರ ಏಳು ಕಾವ್ಯದ ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿ ಬಿಡುಗಡೆ ಮಾಡಿ ಮಾತನಾಡಿದ ವೇಳೆ ಪ್ರೊ. ಪುರುಷೋತ್ತಮ ಬಿಳಿಮಲೆ ಈ ಹೇಳಿಕೆ ನೀಡಿದ್ದಾರೆ.

ಸತ್ಯವನ್ನು ಹೇಳಲು ಹಿಂಜರಿಯಬಾರದು. ಯಕ್ಷಗಾನದ ಮೇಳದ ಸಲುವಾಗಿ,  ಜನಪದ ಕಾರ್ಯಕ್ರಮದ ಸಲುವಾಗಿ ಆರು ತಿಂಗಳ ಕಾಲ ಮನೆಯಿಂದ ದೂರ ಇರುತ್ತಾರೆ. ಅಂತಹ ಸಮಯದಲ್ಲಿ ಕಲಾವಿದರ ಕಾಮ ಹೇಗಿರತ್ತೆ?. ಯಕ್ಷಗಾನದ ಒಳಗಡೆ ಅದು ಅನಿವಾರ್ಯ. ಸ್ತ್ರೀ ವೇಷಧಾರಿಗಳಿಗೆ ಹೆಚ್ಚು  ಒತ್ತಡವಿರುತ್ತದೆ. ಸ್ತ್ರೀ ವೇಷದಾರಿಯ ಮೇಲೆ ಇತರರ ಕಣ್ಣಿರುತ್ತೆ. ಇದು ಕಲಾವಿದರ ಸಂಬಂಧ. ಸ್ತ್ರೀ ವೇಷಧಾರಿ ಅದನ್ನು ನಿರಾಕರಿಸಿದರೆ ಮರು ದಿವಸ ಭಾಗವತರು ಅವನಿಗೆ ಹೆಚ್ಚು ಪದ್ಯ ಕೊಡುವುದಿಲ್ಲ.

ಇದು ಬದುಕಿನ ಪ್ರಶ್ನೆ. ಕಲೆ, ದೈಹಿಕ ಕಾಮನೆಗಳು ರಂಗಭೂಮಿಯ ಎದುರು ಕಾಣುವ ಲೋಕಕಿಂತ ಭಿನ್ನವಾಗಿರುವ ಕುರಿತು ವಿದ್ವಾಂಸರು ತಿಳಿದು ಅರ್ಥಮಾಡಿಕೊಂಡು ಯಾರಿಗೂ ನೋವಾಗದಂತೆ ಬರೆದರೆ ಜಾನಪದಕ್ಕೆ ಹೊಸ ಆಯಾಮ ಬರತ್ತೆ ಎಂದು  ಕಾರ್ಯಕ್ರಮದಲ್ಲಿ ಪ್ರೊ ಪುರುಷೋತ್ತಮ ಬಿಳಿಮನೆ ಹೇಳಿದ್ದಾರೆ.

Key words: Yakshagana, artists, homosexuals, Prof. Purushottam Bilimane,  controversial statement