Saturday, August 1, 2026

BDA Apartments

Home Front Page ಪ್ರತಿಭೆ ಗ್ರಾಮೀಣರಲ್ಲಿ ಅಡಗಿದೆ: ಪ್ರತಿ ಪೋಷಕರು, ಸಂಘಟನೆಗಳು ಪ್ರೋತ್ಸಾಹಿಸಿ- ಪ್ರೊ.ಕೆ ಎಸ್ ರಂಗಪ್ಪ

ಪ್ರತಿಭೆ ಗ್ರಾಮೀಣರಲ್ಲಿ ಅಡಗಿದೆ: ಪ್ರತಿ ಪೋಷಕರು, ಸಂಘಟನೆಗಳು ಪ್ರೋತ್ಸಾಹಿಸಿ- ಪ್ರೊ.ಕೆ ಎಸ್ ರಂಗಪ್ಪ

ಮೈಸೂರು, ಆಗಸ್ಟ್ 1,2026 (www.justkannada.in):  ಪ್ರತಿಭೆ ಗ್ರಾಮೀಣರಲ್ಲಿ ಅಡಗಿದೆ. ಪ್ರತಿಭೆ ಯನ್ನು ಪ್ರೋತ್ಸಾಹಿಸಿ. ರಾಷ್ಟ್ರದ ಪ್ರಗತಿಗೆ    ಪ್ರತಿಭೆಗಳು ದಾರಿದೀಪ. ಪ್ರತಿ ಪೋಷಕರು, ಸಂಘಟನೆಗಳು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ವಿದ್ಯಾರ್ಥಿ ಹಾಗೂ ಪೋಷಕರಿಗೆಗಳಿಗೆ ವಿಶ್ರಾಂತ ಕುಲಪತಿ ಪ್ರೊ.ಕೆ ಎಸ್ ರಂಗಪ್ಪ ಅವರು ತಿಳಿ ಹೇಳಿದರು.

ಹುಣಸೂರಿನ ಒಕ್ಕಲಿಗರ ಸಂಘ ನಾಡಪ್ರಭು ಕೆಂಪೇಗೌಡ ರ 517 ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರೊ. ಕೆ.ಎಸ್ ರಂಗಪ್ಪ ಮಾತನಾಡಿದರು.

ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಶ್ರೀ ಸೋಮೇಶ್ವರನಾಥ್ ಸ್ವಾಮೀಜಿ  ದೀಪ ಬೆಳಗಿ ನಾಡಪ್ರಭು ಕೆಂಪೇಗೌಡರ ಹಾಗೂ ಚೆನ್ನಮ್ಮಜೀ ನವರ ಭಾವಚಿತ್ರಕ್ಜೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಪ್ರೊ. ಎಚ್ ಆರ್. ಸಿದ್ದೇಗೌಡರು ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದರು. ಹುಣಸೂರು ಶಾಸಕರು ಜಿ ಡಿ ಹರೀಶ್ ಗೌಡ ಮಾತನಾಡಿ ಕೆಂಪೇಗೌಡರು ತಮ್ಮ ಆಡಳಿತದಲ್ಲಿ ಸರ್ವ ಜನಾಂಗದ ಕ್ಷೇಮ ಬಯಸಿ ಆಡಳಿತ 500 ವರ್ಷಗಳ ಹಿಂದೆ ನಡೆಸಿದಂತೆ ನಾನೂ ಕೂಡ ಶಾಸಕನಾಗಿ ತಾಲೂಕಿನ ಸರ್ವರ ಯಶಸ್ಸಿಗೆ ದುಡಿಯುವೆ ಎಂದು ನುಡಿದರು. ಪಕ್ಕದ ತಾಲ್ಲೂಕಿನ ರಂಗಪ್ಪರಂತ ಗ್ರಾಮೀಣ ಪ್ರತಿಭೆ ರಾಸಾಯನ ಶಾಸ್ತ್ರದಲ್ಲಿ ಸಾಧನೆಗೈದದ್ದು, ಇಂದಿನ ಸಭೆಯ ಮುಖ್ಯ ಅತಿಥಿ ಆಗಿರುವುದು ನಮ್ಮೆಲರ ಹೆಮ್ಮೆ ಎಂದರು.

ಆರು ಜನ ಸಾಧಕರಿಗೆ ಸನ್ಮಾನ,150 ಪ್ರತಿಭಾವಂತ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಹಿರಿಯ ವಕೀಲ ಯೋಗಾನಂದ ಸ್ವಾಗತಿಸಿದರು. ಶಶಿ ಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗಣೇಶಗೌಡ ಸಂಘ ಮುಂದಿನ ಸಾಲಿನಲ್ಲಿ ಕೆಂಪೇಗೌಡರ ಜಯಂತಿ ಮತ್ತು ಪ್ರತಿಭಾಪುರಸ್ಕಾರ ಬೃಹತ್ತಾಗಿ ಸಂಘ ಏರ್ಪಡಿಸಲಿದೆ ಎಂದರು.

ಪದಾಧಿಕಾರಿಗಳಾದ ಬಾಲಕೃಷ್ಣ, ಜಯರಾಮ್, ಸತೀಶ್ ಪಾಪಣ್ಣ ರಾಮಕೃಷ್ಣ,ರಾಮಕೃಷ್ಣೆ ಗೌಡರು ಬಸವರಾಜ್, ಸುನೀತಾ ಜಯರಾಮ್, ಶಶಿ, ರಾಜು, ಕುಮಾರ್, ವಿನಯ್, ಗಂಗಾಧರ್,ಕವಿತಾ,150 ವಿದ್ಯಾರ್ಥಿಗಳ ಪೋಷಕರು, ಮುಂತಾದವರು ಪಾಲ್ಗೊಂಡಿದ್ದರು.

Key words: Talent, rural areas, parent, organization, encourage, Prof. K.S. Rangappa