ಪ್ರೊ.ಕೆ.ಎಸ್‌. ರಂಗಪ್ಪ @70: ಮೇ 28, 29ರಂದು “ ಮಾಲಿಕ್ಯುಲರ್ ಮೆಡಿಸಿನ್ “ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ.

Prof. K.S. Rangappa @70: An international conference on 'Molecular Medicine' on May 28 and 29. An international conference on "Molecular Medicine" has been organized on May 28 and 29 to celebrate the 70th birthday of international chemist and former vice-chancellor Prof. K.S. Rangappa. This conference will take place under the joint auspices of the Chemical Biology Society of India, the Department of Chemistry of Mysore University, the Department of Organic Chemistry, and the well-wishers of Prof. K.S. Rangappa.

 

ಮೈಸೂರು,ಮೇ ೨೦, ೨೦೨೫:  ಅಂತರಾಷ್ಟ್ರೀಯ ರಸಾಯನ ಶಾಸ್ತ್ರ ವಿಜ್ಞಾನಿ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ೭೦ ನೇ ಹುಟ್ಟು ಹಬ್ಬದ ಅಂಗವಾಗಿ ಇದೇ ಮೇ 28, 29ರಂದು “ ಮಾಲಿಕ್ಯುಲರ್ ಮೆಡಿಸಿನ್ “ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.

ಕೆಮಿಕಲ್ ಬಯೋಲಜಿ ಸೊಸೈಟಿ ಇಂಡಿಯಾ, ಮೈಸೂರು ವಿವಿಯ ಕೆಮಿಸ್ಟ್ರಿ ವಿಭಾಗ, ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಭಾಗ ಹಾಗೂ  ಪ್ರೊ.ಕೆ.ಎಸ್. ರಂಗಪ್ಪ ಅವರ ಹಿತೈಷಿಗಳ ಸಂಯುಕ್ತಾಶ್ರಯದಲ್ಲಿಈ ಸಮ್ಮೇಳನ ನಡೆಯಲಿದೆ.

ಇದರಲ್ಲಿ ‘ಮಾಲಿಕ್ಯುಲರ್ ಮೆಡಿಸಿನ್‌ನಲ್ಲಿ ಹೊಸ ಸವಾಲು ಹಾಗೂ ಆವಿಷ್ಕಾರಗಳು’ ಕುರಿತಂತೆ ವಿಚಾರಸಂಕಿರಣ ನಡೆಯಲಿದೆ.  ಎರಡು ದಿನಗಳ ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶ ಹಾಗೂ ವಿದೇಶಗಳ ವಿಜ್ಞಾನಿಗಳು ಭಾಗವಹಿಸುವರು.

ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಮ್ಮೇಳನ ನಡೆಯಲಿದೆ. ರಾಸಾಯನಿಕ ವಿಜ್ಞಾನ,  ಮಾಲಿಕ್ಯುಲರ್ ಬಯೋಲಜಿ, ಮೆಡಿಸಿನ್, ನ್ಯಾನೋ ಟೆಕ್ನಾಲಜಿಯನ್ನು ಒಗ್ಗೂಡಿಸುವಲ್ಲಿನ ಅತ್ಯಾಧುನಿಕ ಪ್ರಗತಿಯನ್ನು ಈ ಸಮ್ಮೇಳನ ಅನಾವರಣಗೊಳಿಸಲಿದೆ.

ಖ್ಯಾತ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಅವರ ನಡುವೆ ವೈಜ್ಞಾನಿಕ ವಿಚಾರ ಹಾಗೂ ಪರಿಣತಿಯನ್ನು ವಿನಿಮಯಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ಸಹ ಈ ಸಮ್ಮೇಳನ ಹೊಂದಿದೆ.

ಪ್ರಪಂಚದಾದ್ಯಂತ ವಿಜ್ಞಾನಿಗಳು, ಸಂಶೋಧಕರು, ವೈದ್ಯರು ಮತ್ತು ಉದ್ಯಮ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸುವ ಆವಿಷ್ಕಾರ ಗಳನ್ನು ಹಂಚಿಕೊಳ್ಳಲು ಹಾಗೂ ಅತ್ಯಾಧುನಿಕ ವಿಧಾನಗಳನ್ನು ಚರ್ಚಿಸಲು ಈ ಸಮ್ಮೇಳನ ವೇದಿಕೆ ಕಲ್ಪಿಸಲಿದೆ.

ಸಮ್ಮೇಳನ ದಲ್ಲಿ ಪೋಸ್ಟರ್ ಪ್ರಸ್ತುತಿ ಹಾಗೂ ಪ್ರಾಯೋ ಜಕತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಲು ವಿದ್ಯಾರ್ಥಿ ಗಳು, ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕ ಸದಸ್ಯರು, ಕಾರ್ಪೋರೇಟ್ ಮತ್ತು ಕೈಗಾರಿಕಾ ಪ್ರತಿನಿಧಿಗಳು ಹಾಗೂ ವಿದೇಶಿ ಪ್ರತಿನಿಧಿಗಳಿಗೆ ಪ್ರತ್ಯೇಕ ನೋಂದಣಿ ಶುಲ್ಕ ನಿಗಧಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ www.nimm2025.com ವೆಬ್‌ಸೈಟ್‌ಗೆ ಆಸಕ್ತರು ಭೇಟಿ ನೀಡ ಬಹುದು ಎಂದು ಪ್ರಕಟಣೆ ತಿಳಿಸಿದೆ.

ಜನ್ಮಾದಿನಾಚರಣೆ:

ಮೇ ೨೮ ರಂದು ಸಂಜೆ ೫ ಗಂಟೆಗೆ ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರ ೭೦ ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಐಐಎಸ್ಸಿ ಮಾಜಿ ನಿರ್ದೇಶಕ ಪದ್ಮಶ್ರೀ ಪ್ರೊ.ಗೋವರ್ದನ್‌ ಮೆಹ್ತ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಡಾ. ಸಿ.ಎನ್.ಮಂಜುನಾಥ್‌, ಯದುವೀರ್‌ ಒಡೆಯರ್‌ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.‌ ಹೆಗ್ಡೆ ವಹಿಸುವರು.

ಇದೇ ವೇಳೆ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಪೂರ್ಣಿಮಾದೇವಿ ರಂಗಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

key words: Prof. K.S. Rangappa, international conference, ‘Molecular Medicine’ Mysore, UOM

vtu

SUMMARY: 

Prof. K.S. Rangappa @70: An international conference on ‘Molecular Medicine’ on May 28 and 29.

An international conference on “Molecular Medicine” has been organized on May 28 and 29 to celebrate the 70th birthday of international chemist and former vice-chancellor Prof. K.S. Rangappa. This conference will take place under the joint auspices of the Chemical Biology Society of India, the Department of Chemistry of Mysore University, the Department of Organic Chemistry, and the well-wishers of Prof. K.S. Rangappa.