ಪಾಕ್ ಪರ ಘೋಷಣೆ ವಿಚಾರ: ಎಫ್ ಎಸ್ ಎಲ್ ವರದಿ ತಡವಾದರೂ ಕಾನೂನು ರೀತಿ ಕ್ರಮ- ಸಚಿವ ರಾಮಲಿಂಗರೆಡ್ಡಿ.

ಯಾದಗಿರಿ,ಮಾರ್ಚ್,5,2024(www.justkannada.in):  ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗರೆಡ್ಡಿ, ಎಫ್ ಎಸ್ ಎಲ್ ವರದಿ ತಡವಾಗಿರಬಹುದು. ಆದರೆ  ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಪ್ರಕರಣ ಸಂಬಂಧ  ಎಫ್‌ಎಸ್‌ಎಲ್ ವರದಿಗಾಗಿ ಕಳುಹಿಸಲಾಗಿತ್ತು, ಎಫ್ ಎಸ್ ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ದೃಢವಾಗಿದ್ದು ಈ ಹಿನ್ನೆಲೆಯಲ್ಲಿ   ಆರೋಪಿಗಳನ್ನ ಬಂಧಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.

ಎಫ್‌ಎಸ್‌ಎಲ್ ವರದಿಗೂ ಮುನ್ನ  ಬಿಜೆಪಿಯವರು ನಕಲಿ ವರದಿ ಬಿಟ್ಟಿದ್ದರು. ನಮ್ಮ ವರದಿ ಒಂದು ದಿನ ತಡವಾಗಿರಬಹುದು ಆದರೆ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡುವಾಗ ಬಿಜೆಪಿ ಮುಖಂಡ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ, ಅದರ ಬಗ್ಗೆ ಬಿಜೆಪಿಯವರು ಏನು ಮಾತನಾಡಲ್ಲ. ಅವನ ಬಗ್ಗೆ ಕೇಸ್ ಹಾಕಿಲ್ಲ, ಕ್ರಮ ಕೈಗೊಂಡಿಲ್ಲ ಆದರೆ ನಮ್ಮ ಸರ್ಕಾರ ಯಾರು ತಪ್ಪು ಮಾಡಿದ್ದಾರೆಂದು ನೋಡಿ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ರಾಮಲಿಂಗರೆಡ್ಡಿ ಟಾಂಗ್ ನೀಡಿದರು.

Key words: Pro-Pak -declaration –issue-FSL- report – legal action – Minister -Ramalingareddy.