ಅನುದಾನ ತಾರತಮ್ಯ ವಿಚಾರ: ಪ್ರಧಾನಿ ಮೋದಿ ಟೀಕಿಸಿದ ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿರುಗೇಟು.

ಬೆಂಗಳೂರು,ಮಾರ್ಚ್,5,2024(www.justkannada.in): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ  ಹಂಚಿಕೆಯಲ್ಲಿ ತಾರತಮ್ಯ  ಮಾಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯನ್ನ ಟೀಕಿಸಿದ್ದ ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಬೆಳಗ್ಗೆಯಿಂದ ಸಂಜೆಯವರೆಗೂ ಮೋದಿ ವಿರುದ್ದ ಆರೋಪ ಮಾಡುತ್ತಾ, ಟೀಕೆ ಮಾಡುತ್ತಾ ಕಾಲ ಕಳೆಯುತ್ತೀರಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹಣಕಾಸು ಆಯೋಗದ ತೀರ್ಮಾನ ಮಾಡಿದ್ದು ಬಿಟ್ಟರೆ ಏನು ಕೊಟ್ಟಿದ್ದಾರೆ ಹೇಳಿ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ನೀರಿ ಸಮಸ್ಯೆ ಸಾಕಷ್ಟು ಇದೆ. ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಒಂದು ಟ್ಯಾಂಕರ್​ ಗೆ ಎರಡುವರೆ ಸಾವಿರ ಕೇಳುತ್ತಿದ್ದಾರೆ. ನಿನ್ನೆ ಡಿಸಿಎಂ ಸಭೆ ಮಾಡಿದ್ದಾರೆ. ಈಗ ನೀವು ಸಭೆ ಮಾಡಿದ್ದಿರಾ, ಇಷ್ಟು ದಿನ ಏನೂ ಮಾಡುತ್ತಿದ್ರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರೇ ನೀವು ಜ್ಯಾತ್ಯಾತೀತೆ ಬಗ್ಗೆ ಮಾತನಾಡುತ್ತಿರಾ, ನಾನು ಮುಸ್ಲಿಂಮರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಟ್ಟೆ. ನಮ್ಮ ಪಕ್ಷ ಮುಗಿಯುತ್ತದೆ ಎಂದು ಹೇಳುವ ಸಿದ್ದರಾಮಯ್ಯನವರ ಕಲ್ಪನೆಗೆ ತಾಳ್ಮೆ ಇರಲಿ. ಯಾರು ಮುಗಿಯುತ್ತಾರೆ ನೋಡೋಣ ಎಂದು ಹೆಚ್.ಡಿ ದೇವೇಗೌಡರು ಕಿಡಿಕಾರಿದರು.

Key words: Former PM -HD Deve Gowda – CM Siddaramaiah – criticizing -PM -Modi