ನ್ಯೂಯಾರ್ಕ್ ನಲ್ಲಿ ಹೋಟೆಲ್ ಬಿಸಿನೆಸ್ ಶುರು ಮಾಡಿದ ಪ್ರಿಯಾಂಕಾ ಚೋಪ್ರಾ

ಬೆಂಗಳೂರು, ಮಾರ್ಚ್ 08, 2021 (www.justkannada.in): 

ನ್ಯೂಯಾರ್ಕ್ ನಲ್ಲಿ ಹೊಸ ಉದ್ಯಮ ಆರಂಭಿಸಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಹೌದು. ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ.

ಇದರ ಲಾಂಚ್ ಕಾರ್ಯಕ್ರಮ ನೆರವೇರಿಸಿದ್ದು, ರೆಸ್ಟೋರೆಂಟ್ ಗೆ ಸೋನಾ ಎಂದು ಹೆಸರಿಡಲಾಗಿದೆ.

ತಮ್ಮ ರೆಸ್ಟೋರೆಂಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ, ನಮ್ಮ ಹೊಸ ರೆಸ್ಟೋರೆಂಟ್ ಸೋನಾವನ್ನು ನಿಮ್ಮ ಮುಂದಿಡಲು ನಾನಗೆ ಖುಷಿಯಾಗುತ್ತಿದೆ. ಇಲ್ಲಿ ಭಾರತೀಯ ಆಹಾರಗಳು ಸಿಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಹರಿನಾಯಕ್ ಅಡುಗೆ ಮಾಡಲಿದ್ದು,ನನ್ನ ದೇಶದ ಫುಡ್ ಜರ್ನಿಗೆ ನಿಮ್ಮನ್ನು ಕರೆದೊಯ್ಯುತ್ತಾರೆ ಎಂದು ಬರೆದಿದ್ದಾರೆ.