ಯುವಕರಿಗೆ ಶಿಕ್ಷಣ, ಉದ್ಯೋಗದ ಬದಲು ಧರ್ಮರಕ್ಷಣೆ, ಗೋರಕ್ಷಣೆ ಬಿರುದು ನೀಡುತ್ತಿದ್ದಾರೆ- ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ.

ಬೆಂಗಳೂರು,ಅಕ್ಟೋಬರ್,18,2022(www.justkannada.in):   ರಾಜ್ಯ ಬಿಜೆಪಿ ಸರ್ಕಾರ ಯುವಕರಿಗೆ ಶಿಕ್ಷಣ, ಶಿಕ್ಷಣ, ಉದ್ಯೋಗ ನೀಡುತ್ತಿಲ್ಲ. ಬದಲಾಗಿ ಧರ್ಮರಕ್ಷಣೆ, ಗೋರಕ್ಷಣೆ ಬಿರುದು ನೀಡುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಪ್ರಿಯಾಂಕ್ ಖರ್ಗೆ, ಯುವಕರ ಭವಿಷ್ಯದ ಜೊತೆಗೆ ಬಿಜೆಪಿ ಚೆಲ್ಲಾಟ ಆಡುತ್ತಿದೆ.  ಹಿಂದುಳಿದ ಯುವಕರ ಬ್ರೈನ್ ವಾಶ ಮಾಡಲಾಗುತ್ತಿದೆ. ಹಿಂದೂಧರ್ಮದ ಹೆಸರಲ್ಲಿ ಬ್ರೈನ್ ವಾಶ್ ಮಾಡಲಾಗುತ್ತಿದೆ.  ಸಿಎಂ ಬಸವರಾಜ ಬೊಮ್ಮಾಯಿ ಮೂಕಬಸವನ ರೀತಿ ಕುಳಿತರೆ ಆಗಲ್ಲ. ಜನರಿಗೆ ಉತ್ತರಿಸಬೇಕು ಎಂದು ವಾಗ್ದಾಳಿ ನಡೆಸಿದರು.

Key words: Priyank Kharge- against – government -youth – education-employment.