ದೇಶದ ಜನತೆ ತಮ್ಮನ್ನು ಆರಾಧಿಸಬೇಕೆಂದು ಪ್ರಧಾನಿ ಮೋದಿ ಅವರ ಬಯಕೆ- ರಾಹುಲ್ ಗಾಂಧಿ ಟೀಕೆ.

ನವದೆಹಲಿ,ಜನವರಿ,9,2023(www.justkannada.in): ದೇಶದ ಜನತೆ ತಮ್ಮನ್ನು ಆರಾಧಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಟೀಕಿಸಿದರು.

ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು  ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ, ಜನರ ಸಂಪತ್ತನ್ನು ಬಳಸಿ, ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಮತ್ತು ಭಯವನ್ನು ಸೃಷ್ಟಿಸುವ ಮೂಲಕ ಬಲವಂತವಾಗಿ ತಮ್ಮನ್ನು ಆರಾಧಿಸಬೇಕೆಂದು ಮೋದಿ ಬಯಸುತ್ತಿದ್ದಾರೆ. ಅವರನ್ನು ಬಲವಂತವಾಗಿ ಪೂಜಿಸಬೇಕೆಂದು ಆರ್‌ಎಸ್‌ಎಸ್ ಬಯಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಇದನ್ನೇ ಬಯಸುತ್ತಾರೆ ಎಂದರು.

ಭಾರತ್ ಜೋಡೋ ಯಾತ್ರೆ ಸಮಾಜದಲ್ಲಿ ಹರಡುತ್ತಿರುವ ದ್ವೇಷ ಮತ್ತು ಭಯದ ವಿರುದ್ಧವಾಗಿದೆ. ಯಾತ್ರೆಯು ಸಂಯಮ ಮತ್ತು ಸ್ವಯಂ ಧ್ಯಾನದ ಬಗ್ಗೆ ಸೂಚಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

Key words: Prime Minister -Modi – people – country – worship-Rahul Gandhi