ಕಾಯಕ ಕ್ರಾಂತಿಗೆ ನಮ್ಮ ಸರ್ಕಾರ ಸಿದ್ಧ: ಕಳಕಳಿಯಿಂದ ಕೆಲಸ ಮಾಡುವವರಿಗೆ ವೋಟ್ ಹಾಕಿ- ಸಿಎಂ ಬೊಮ್ಮಾಯಿ ಮನವಿ.

ಚಿತ್ರದುರ್ಗ,ಜನವರಿ,7,2023(www.justkannada.in): ಕಾಯಕ ಕ್ರಾಂತಿ ಆಗಬೇಕೆಂಬುದು ನಮ್ಮ ಆಸೆ. ಕಾಯಕ ಕ್ರಾಂತಿಗೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮೇದಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  21ನೇ ಶತಮಾನದಲ್ಲಿ ಕನಸು ನನಸಾಗಿಸುವ ಕೆಲಸ ಮಾಡುತ್ತೇವೆ. ಬೋವಿ, ಬಂಜಾರ, ಕುರುಬ ಸಮುದಾಯಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳುತ್ತೇವೆ.  ರಾಜಕಾರಣದಲ್ಲಿ ಮತದಾರರೇ ಮಾಲೀಕರು. ನೀವೇ ತೀರ್ಮಾನಿಸಿ.  ಸುಳ್ಳು ಹೇಳಿ ಇಷ್ಟು ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ನಿಮ್ಮ ಬಗ್ಗೆ ಕಳಕಳಿಯಿಂದ ಕೆಲಸ ಮಾಡುವವರಿಗೆ ವೋಟ್ ಹಾಕಿ ಮತದ ಗೌರವ ಹೆಚ್ಚಿಸಿ ಎಂದು ಮನವಿ ಮಾಡಿದರು.  

ಕುದುರಿ ಇದೆ ಮೈದಾನ ಇದ. ನಾವು ತಯಾರಿದ್ದೇವೆ.  ಚುನಾವಣೆ ವೇಳೇ ಒಂದು ತಿಂಗಳು ಮಾತ್ರ ರಾಜಕಾರಣ ಮಾಡಬೇಕು. ಕಾಯಕ ಕ್ರಾಂತಿಗೆ  ನಮ್ಮ ಸರ್ಕಾರ ಸಿದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Key words: Our -government – ready – Kayak revolution-CM -Bommai