Sunday, September 20, 2026

BDA Apartments

ಇಂಡಿಯಾ ಕೂಟದಿಂದ ಸನಾತನ ಧರ್ಮ ಅಂತ್ಯವಾಡಲು ಹುನ್ನಾರ- ಪ್ರಧಾನಿ ಮೋದಿ ವಾಗ್ದಾ...
Home Front Page ಇಂಡಿಯಾ ಕೂಟದಿಂದ ಸನಾತನ ಧರ್ಮ ಅಂತ್ಯವಾಡಲು ಹುನ್ನಾರ- ಪ್ರಧಾನಿ ಮೋದಿ ವಾಗ್ದಾಳಿ.

ಇಂಡಿಯಾ ಕೂಟದಿಂದ ಸನಾತನ ಧರ್ಮ ಅಂತ್ಯವಾಡಲು ಹುನ್ನಾರ- ಪ್ರಧಾನಿ ಮೋದಿ ವಾಗ್ದಾಳಿ.

ಮಧ್ಯಪ್ರದೇಶ,ಸೆಪ್ಟಂಬರ್,14,2023(www.justkannada.in):  ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದ‍ಂತೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.

ಈ ಕುರಿತು ಮಧ್ಯಪ್ರದೇಶದ ಬಿನಾನಗರದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಇಂಡಿಯಾ ಮೈತ್ರಿಕೂಟ ಸನಾತನ ಧರ್ಮದ ನಾಶಕ್ಕೆ ಹೊರಟಿದೆ. ಸನಾತನ  ಧರ್ಮವನ್ನ ಅಂತ್ಯವಾಡಲು ಹುನ್ನಾರ ನಡೆಸುತ್ತಿದೆ.  ವಿಪಕ್ಷ ಜನರ ನಂಬಿಕೆಯ ವಿರುದ್ದ ದಾಳಿ ಮಾಡುತ್ತಿದೆ ಸನಾತನ ತಿಳಿಸಕೊಟ್ಟವರು ವಿವೇಕಾನಂದರು. ಸನಾತನದ ಮೇಲಿನ ದಾಳಿ ವಿರುದ್ದ ಸಿಡಿದೇಳಬೇಕು ಎಂದು ಕರೆ ನೀಡಿದರು.ಇಂಡಿಯಾ ಕೂಟದಿಂದ ಸನಾತನ ಧರ್ಮ ಅಂತ್ಯವಾಡಲು ಹುನ್ನಾರ pm modi

ಸನಾತನ ಧರ್ಮದಿಂದ ಇಂದು ದೇಶ ಒಗ್ಗಟ್ಟಾಗಿದೆ.  ಇಂಡಿಯಾ ಕೂಟ ಹಿಂದೂ ಧರ್ಮದ ವಿರೋಧಿ ಕೂಟ. ಮಹಾತ್ಮ ಗಾಂಧೀಜಿ, ತಿಲಕರು ಹಿಂದೂ ಧರ್ಮಕ್ಕಾಗಿ ಬದುಕಿದರು ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Prime Minister -Modi –alliance- end- Sanatan Dharma.