ಶಾಸಕ ಜಿಟಿ ದೇವೇಗೌಡರ ಪುತ್ರ ಹರೀಶ್ ಗೌಡಗೆ ಖಡಕ್ ವಾರ್ನಿಂಗ್ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ನವೆಂಬರ್,20,2021(www.justkannada.in): ಎಂಡಿಸಿಸಿ ಬ್ಯಾಂಕ್ ಸಾಲ ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು. ಒಂದು ವೇಳೆ ಮಾಡಿದ್ರೆ ಅಧ್ಯಕ್ಷರನ್ನು ಬಲಿ ಹಾಕಬೇಕಾಗುತ್ತೆ ಎಂದು ಶಾಸಕ ಜಿಟಿ ದೇವೇಗೌಡರ ಪುತ್ರ ಹರೀಶ್ ಗೌಡಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಖಡಕ್ ವಾರ್ನಿಂಗ್ ನೀಡಿದರು.

ಜನಸ್ವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಎಂಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಮೈಸೂರು ಚಾಮರಾಜನಗರ ನಗರದ 15 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕೇವಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾತ್ರ ಸಾಲ ಕೊಡೋದಲ್ಲ. ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಸಾಲ ಹಂಚಿಕೆ ಮಾಡಬೇಕು. 602 ಕೋಟಿ ಬೆಳೆ ಸಾಲ ಹಂಚಿಕೆ ಆಗಬೇಕಿದೆ. ಇನ್ನೂ 58 % ಸಾಲದ ಗುರಿ ಇದೆ.

ಡಿಸಿಸಿ ಬ್ಯಾಂಕ್ ಗಳಲ್ಲಿ ಅಧ್ಯಕ್ಷರು ತಮ್ಮ ಹಿಂಬಾಲಕರು, ಬೇಕಾದವರಿಗೆ ಮಾತ್ರ ಸಾಲ ಕೊಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ಈ ಸಂಬಂಧ ಈಗಾಗಲೇ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ನೋಟೀಸ್ ಕೊಟ್ಟಿದ್ದೇನೆ ಎಂದು ಎಸ್ ಟಿ ಸೋಮಶೇಖರ್ ತಿಳಿಸಿದರು.

Key words: President – MDCC bank  – debt-mysore-Minister- ST Somashekhar.