ಮತ್ತೆ ಒಂದಾಗುತ್ತಿದೆ ‘ದಿ ವಿಲನ್’ ಜೋಡಿ !

ಬೆಂಗಳೂರು, ಸೆಪ್ಟೆಂಬರ್ 05, 2020 (www.justkannada.in):ನಿರ್ದೇಶಕ ಪ್ರೇಮ್ ಮತ್ತು ಕಿಚ್ಚ ಸುದೀಪ್ ಮತ್ತೊಂದು ಚಿತ್ರದಲ್ಲಿ ಒಂದಾಗುತ್ತಿದ್ದಾರೆ.

ಈ ವಿಷಯವನ್ನು ನಿರ್ದೇಶಕ ಪ್ರೇಮ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದಾರೆ.

ಸುದೀಪ್ ಜೊತೆ ಮತ್ತೊಂದು ಚಿತ್ರ ಮಾಡುತ್ತಿದ್ದೇನೆ. ಇದರಲ್ಲಿ ನೀವು ಕಿಚ್ಚ ಸುದೀಪ್ ಅವರನ್ನು ಈ ಹಿಂದೆ ಎಂದೂ ನೋಡದ ಅವತಾರದಲ್ಲಿ ಕಾಣಲಿದ್ದೀರಿ ಎಂದು ಪ್ರೇಮ್ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಮತ್ತು ಪ್ರೇಮ್ ದಿ ವಿಲನ್ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿ ಅದು 2018ರಲ್ಲಿ ಬಿಡುಗಡೆಯಾಗಿತ್ತು. ಶಿವರಾಜ್ ಕುಮಾರ್ ಕೂಡ ಅದರಲ್ಲಿ ನಟಿಸಿದ್ದರು.