ನಟಿ ರಾಗಿಣಿ ವಿರುದ್ದ ಪ್ರಕರಣ ದಾಖಲು…

ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಡ್ರಗ್ಸ್ ದಂಧೆಗೆ  ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಇದೀಗ ನಟಿ ರಾಗಿಣಿ ವಿರುದ್ದ ಪ್ರಕರಣ ದಾಖಲಾಗಿದೆ.jk-logo-justkannada-logo

ಸಿಸಿಬಿ ಎಸಿಪಿ ಗೌತಮ್ ದೂರು ನೀಡಿದ್ದು ಈ ಆಧಾರದ ಮೇಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ನಟಿ ರಾಗಿಣಿ ವಿರುದ್ದ ಪ್ರಕರಣ ದಾಖಲಾಗಿದೆ.  ಅಪರಾಧ ಒಳಸಂಚು ಅಡಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ಎನ್ ಡಿಪಿಎಸ್ ಕಾಯ್ದೆ 21,21ಸಿ, 27ಎ, 27ಬಿ,29, ಐಪಿಸಿ 120ಬಿ ಅಡಿ ನಟಿ ರಾಗಿಣಿ ವಿರುದ್ದ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಡ್ರಗ್ಸ್ ದಂಧೆಗೆ  ಸ್ಯಾಂಡಲ್ ವುಡ್ ನಂಟಿನಲ್ಲಿ ನಟಿ ರಾಗಿಣಿ ಹೆಸರು ಕೇಳಿ ಬಂದಿದ್ದು ಇಂದು 2ನೇ ದಿನವೂ ನಟಿ ರಾಗಿಣಿ ಅವರ ವಿಚಾರಣೆ ನಡೆಯಲಿದೆ.

Key words: Case- filed- against –actress- Ragini.