ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಪ್ರಣಿತಾ ಸುಭಾಷ್

ಬೆಂಗಳೂರು, ಅಕ್ಟೋಬರ್ 27, 2020 (www.justkannada.in): ಪ್ರವಾಹ ಸಂತ್ರಸ್ತರ ನೆರವಿಗೆ ನಟಿ ಪ್ರಣಿತಾ ಸುಭಾಷ್ ಧಾವಿಸಿದ್ದಾರೆ.

ತಮ್ಮ ‘ಪ್ರಣಿತಾ ಫೌಂಡೇಷನ್‌’ ಮೂಲಕ ಅಗತ್ಯ ವಸ್ತುಗಳ ಪೂರೈಕೆಗೆ ಅವರು ಮುಂದಾಗಿದ್ದಾರೆ. ಉತ್ತರ ಕರ್ನಾಟಕ, ತೆಲಂಗಾಣದಲ್ಲಿ ಪ್ರವಾಹ ಸಮಸ್ಯೆ ಉಂಟಾಗಿವೆ. ಇದೀಗ ಹೀಗೆ ಕಷ್ಟದಲ್ಲಿ ಸಿಲುಕಿಕೊಂಡಿರುವ ಪ್ರವಾಹ ಸಂತ್ರಸ್ತರ ನೆರವಿಗೆ ನಟಿ ಪ್ರಣಿತಾ ಸುಭಾಷ್ ಧಾವಿಸಿದ್ದಾರೆ.

ಟ್ವಿಟರ್ ಪೇಜ್‌ನಲ್ಲಿ ಬರೆದುಕೊಂಡಿರುವ ಪ್ರಣಿತಾ, ‘ನಮ್ಮಲ್ಲಿ ಅನೇಕರು ದಸರಾ ಹಬ್ಬ ಆಚರಿಸುತ್ತಿದ್ದರೆ, ಅತ್ತ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ನ ಅನೇಕ ಕುಟುಂಬಗಳು ಪ್ರವಾಹದಿಂದ ಸಂಕಷ್ಟಕ್ಕೆ ಗುರಿಯಾಗಿವೆ.

ಪ್ರಣಿತಾ ಫೌಂಡೇಷನ್‌ನ 1 ಲಕ್ಷ ರೂ.ಗಳ ಸಣ್ಣ ಪ್ರಮಾಣದ ದೇಣಿಗೆಯೊಂದಿಗೆ ನಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಕೆಲವು ಅಗತ್ಯವಾದ ವಸ್ತುಗಳನ್ನು ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದಿದ್ದಾರೆ.