Sunday, September 6, 2026

BDA Apartments

Home Front Page ಮೊಮ್ಮಗನೊಂದಿಗೆ ಜಾಲಿ ಮೂಡ್ ನಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್.

ಮೊಮ್ಮಗನೊಂದಿಗೆ ಜಾಲಿ ಮೂಡ್ ನಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್.

ಮೈಸೂರು,ಏಪ್ರಿಲ್ ,24,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಅಭ್ಯರ್ಥಿಯಾಗಿ ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸಿ ಉರಿ ಬಿಸಿಲಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು,  ಇತ್ತ ಯದುವೀರ್ ಅವರ ತಾಯಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅವರು ಮೊಮ್ಮಗನೊಂದಿಗೆ ಜಾಲಿ ಮೂಡ್ ನಲ್ಲಿ ಕಾಲ ಕಳೆದಿದ್ದಾರೆ.

ಇಂದು ಪ್ರಮೋದ ದೇವಿ ಒಡೆಯರ್ ಅವರು ಮೊಮ್ಮಗನೊಂದಿಗೆ  ಮೈಸೂರು ಚಾಮರಾಜ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಮೋದ ದೇವಿ ಒಡೆಯರ್  ಹಾಗೂ ಮೊಮ್ಮಗ ಆದ್ಯವೀರ್  ಮೃಗಾಲಯದಲ್ಲಿ ಪ್ರಾಣಿಗಳ ವೀಕ್ಷಣೆ ಮಾಡಿದರು.

ಇದೆ ವೇಳೆ ಪ್ರಮೋದ ದೇವಿ ಒಡೆಯರ್ ಅವರನ್ನ ಸಿನಿಮಾ ನಟಿ ಮೇಘನಾ ರಾಜ್ ಕುಟುಂಬ ಭೇಟಿಯಾಗಿದ್ದು, ಮೇಘನಾರಾಜ್ ಕುಟುಂಬ ತಮ್ಮ ಪುಟ್ಟ ಮಗನೊಂದಿಗೆ ಮೃಗಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಪ್ರಮೋದ ದೇವಿ ಅವರನ್ನ ಭೇಟಿಯಾಗಿದ್ದು ಮೇಘನಾರಾಜ್ ಅವರು ಕುಶಲೋಪರಿ ವಿಚಾರಿಸಿದ್ದಾರೆ.

Key words: Pramoda Devi Wodeyar, grandson, jolly mood