Monday, October 5, 2026

BDA Apartments

Contact BDA JK_Adv BDA Adv
Home Front Page ಮಹಿಳೆಯರಿಗೆ ಅನ್ಯಾಯವಾದ್ರೂ ಬಿಜೆಪಿಯವರು ಮಾತನಾಡುತ್ತಿಲ್ಲವೇಕೆ..?  ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ

ಮಹಿಳೆಯರಿಗೆ ಅನ್ಯಾಯವಾದ್ರೂ ಬಿಜೆಪಿಯವರು ಮಾತನಾಡುತ್ತಿಲ್ಲವೇಕೆ..?  ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ

ಬಾಗಲಕೋಟೆ,ಮೇ,3,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ತನಿಖೆ ನಡೆಸಲು ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಮಹಿಳೆಯರಿಗೆ ಅನ್ಯಾಯವಾದರೂ ಬಿಜೆಪಿಯವರು ಮಾತನಾಡುತ್ತಿಲ್ಲವೇಕೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,   ಬಿಜೆಪಿಯವರು ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆಂದು ಹೇಳುತ್ತಾರೆ, ಈಗ ಮಹಿಳೆಯರಿಗೆ ಅನ್ಯಾಯ ಆಗಿದೆ ಯಾಕೆ ಮಾತನಾಡಿಲ್ಲ. ಸಿ.ಟಿ.ರವಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸದಾನಂದಗೌಡ, ಆರ್​. ಅಶೋಕ್​​ ಎಲ್ಲಿ ಹೋದರು? ಸಂತ್ರಸ್ತ ಮಹಿಳೆಯರಿಗೆ ಧೈರ್ಯ ಹೇಳುವ ಕೆಲಸ ಮಾಡಲಿ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರ ಸಿಡಿ ಬಿಡಬಹುದು ಎಂಬ  ಸುರಪುರ ವಿಧಾನಸಭಾ  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜುಗೌಡ ಹೇಳಿಕೆಗೆ ಕಿಡಿಕಾರಿದ  ಡಿಸಿಎಂ ಡಿಕೆ ಶಿವಕುಮಾರ್, ರಾಜುಗೌಡ ಒಬ್ಬ ಮೆಂಟಲ್ ಕೇಸ್ ಎಂದರು.

Key words: Prajwal Revanna, case, BJP, DCM, DK Shivakumar