ನಾಳೆ ಸಾಹೋ ರಿಲೀಸ್: ಬಿಡುಗಡೆಗೂ ಮುನ್ನವೇ ಭಾರಿ ದಾಖಲೆ

ಬೆಂಗಳೂರು, ಸೆಪ್ಟೆಂಬರ್ 29, 2019 (www.justkannada.in): ಪ್ರಭಾಸ್ ಅಭಿನಯದ ‘ಸಾಹೋ’ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಸುಮಾರು 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಾಹೋ ತೆರೆ ಕಾಣಲಿದ್ದು ಮೊದಲ ದಿನವೇ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ.

ಬರೋಬ್ಬರಿ 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಾಹೋ’ ವಿತರಣೆ ಹಕ್ಕು, ಡಿಜಿಟಲ್ ರೈಟ್ಸ್ ಮೊದಲಾದ ವ್ಯವಹಾರಗಳ ಮೂಲಕ ಸುಮಾರು 333 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆಯಬಹುದೆಂದು ಹೇಳಲಾಗಿದೆ.