Sunday, September 20, 2026

BDA Apartments

ಮತ್ತೆ ಬೆಲೆ ವಿದ್ಯುತ್ ದರ ಏರಿಕೆ ಬಿಸಿ!? ಅಧಿಕಾರಿಗಳಿಂದ ಪ್ರಸ್ತಾವನೆ BDA JK_Adv BDA Adv
Home Front Page ಮತ್ತೆ ಬೆಲೆ ವಿದ್ಯುತ್ ದರ ಏರಿಕೆ ಬಿಸಿ!? ಅಧಿಕಾರಿಗಳಿಂದ ಪ್ರಸ್ತಾವನೆ

ಮತ್ತೆ ಬೆಲೆ ವಿದ್ಯುತ್ ದರ ಏರಿಕೆ ಬಿಸಿ!? ಅಧಿಕಾರಿಗಳಿಂದ ಪ್ರಸ್ತಾವನೆ

ಬೆಂಗಳೂರು, ಡಿಸೆಂಬರ್ 19, 2021 (www.justkannada.in): ವಿದ್ಯುತ್ ದರ ಹೆಚ್ಚಳಕ್ಕೆ ಜೆಸ್ಕಾಂನಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹೌದು. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿದ್ಯುತ್ ದರ ಏರಿಕೆ ಶಾಕ್ ಎದುರಾಗಿದೆ. ಈ ಸಂಬಂಧ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಯುನಿಟ್ ಗೆ 1.50 ರೂ. ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂದಹಾಗೆ ಒಂದೇ ವರ್ಷದಲ್ಲಿ ಮೂರು ಬಾರಿ ಜೆಸ್ಕಾಂ ದರ ಹೆಚ್ಚಳ ಮಾಡಿದೆ.

ನಾಲ್ಕನೇ ಬಾರಿಗೆ ದರ ಹೆಚ್ಚಳ ಮಾಡಲು ಕೆ.ಇ.ಆರ್.ಸಿ.ಗೆ(ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್) ಪ್ರಸ್ತಾವನೆ ಸಲ್ಲಿಸಲಾಗಿದೆ.

ಜೆಸ್ಕಾಂನ ದರ ಹೆಚ್ಚಳ ಪ್ರಸ್ತಾವನೆಗೆ ಕೈಗಾರಿಕೆ ಸಂಘಟನೆಗಳು, ರೈತರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.