ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮೈಸೂರು, ಆಗಸ್ಟ್,24,2020(www.justkannada.in):  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಹೂಟಗಳ್ಳಿ ಉಪವಿಭಾಗದ 66/11 ಕೆ.ವಿ ಕಲಾಮಂದಿರ ಜಿ.ಐ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಯುನಿವರ್ಸಿಟಿ ವಿದ್ಯುತ್ ಮಾರ್ಗದಲ್ಲಿ ಆಗಸ್ಟ್.25 ರಂದು ಭೂಗತ ಕೇಬಲ್ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಈ ಹಿನ್ನೆಲೆ ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಯುನಿವರ್ಸಿಟಿ ಕ್ಯಾಂಪಸ್, ವಾಗ್ದೇವಿನಗರ, ಯುನಿವರ್ಸಿಟಿ ಕ್ವಾಟ್ರಸ್, ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words: Power-disruption-Mysore- city- tomorrow.