ಅಂತರಾಜ್ಯ ಪ್ರಯಾಣಿಕರಿಗೆ ಬಿಗ್ ರಿಲೀಫ್: ಎಲ್ಲಾ ಕೋವಿಡ್ -19 ನಿಯಮಗಳನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ…

ಬೆಂಗಳೂರು,ಆ,25,2020(www.justkannada.in):  ಕೊರೋನಾ ಮಹಾಮಾರಿ ಹರಡದಂತೆ ತಡೆಯಲು ಸಲುವಾಗಿ ಅಂತರಾಜ್ಯ ಪ್ರಯಾಣಿಕರಿಗೆ ಸರ್ಕಾರ ರೂಪಿಸಿದ್ದ ನಿಯಮಗಳನ್ನ ರದ್ಧುಗೊಳಿಸಿದೆ.  ಹಿಂದೆ ಇದ್ದ ಎಲ್ಲಾ ಕೋವಿಡ್ 19 ನಿಯಮಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅಂತರಾಜ್ಯ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.jk-logo-justkannada-logo

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ನಿಯಮಗಳನ್ನು ರದ್ದುಗೊಳಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ. ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಣಿ, ಬಸ್, ರೈಲು, ವಿಮಾನ ನಿಲ್ದಾಣದಲ್ಲಿ ನಡೆಸುತ್ತಿದ್ದ ವೈದ್ಯಕೀಯ ತಪಾಸಣೆ, ರಾಜ್ಯದ ಗಡಿ ಭಾಗಗಳಲ್ಲಿ ತಪಾಸಣೆ ಸೇರಿದಂತೆ ಜಿಲ್ಲೆಯ ಸ್ವೀಕರಣೆ ಕೇಂದ್ರಗಳಲ್ಲಿ ನಡೆಸುತ್ತಿದ್ದ ವೈದ್ಯಕೀಯ ತಪಾಸಣೆಗಳನ್ನು ರದ್ದುಗೊಳಿಸಲಾಗಿದೆ.Big relief – interstate- travellers-State government- cancel-all Kovid-19- rules

Big relief – interstate- travellers-State government- cancel-all Kovid-19- rules

ಕೈಗಳ ಮೇಲೆ ಮುದ್ರೆ ಹಾಕುವುದು, 14 ದಿನಗಳ ಕಾಲ ಕ್ವಾರಂಟೈನ್ ಅವಧಿ ಸೇರಿದಂತೆ ಕೋವಿಡ್ 19 ನಿಯಮಗಳೆಲ್ಲವೂ ರದ್ಧಾಗಿದ್ದು, ರೋಗಲಕ್ಷಣಗಳು ಕಂಡುಬಂದಲ್ಲಿ ಮಾತ್ರವೇ ಪ್ರತ್ಯೇಕಗೊಂಡು, ವೈದ್ಯಕೀಯ ಸಮಾಲೋಚನೆ ಪಡೆಯುವಂತೆ ಸೂಚನೆ ನೀಡಲಾಗಿದೆ.Big relief – interstate- travellers-State government- cancel-all Kovid-19- rules

ಎರಡು ದಿನಗಳ ಹಿಂದಷ್ಟೆ ಅಂತರಾಜ್ಯ ಪ್ರಯಾಣಿಕ ಹಾಗೂ ಸರಕು ಸಾಗಾಣಿಕೆ ಮೇಲಿದ್ದ ನಿರ್ಬಂಧಗಳನ್ನು ತೆರವುಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಪತ್ರ ಬರೆದಿದ್ದರು.

Key words: Big relief – interstate- travellers-State government- cancel-all Kovid-19- rules