ಮೂರು ದಿನ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ ಮುಂದೂಡಿಕೆ

ಬೆಂಗಳೂರು, ಮಾರ್ಚ್ 01, 2020 (www.justkannada.in): ದೇಶಾದ್ಯಂತ ಮಾರ್ಚ್ 11ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಬಂದ್ ಅನ್ನು ವಿವಿಧ ಒಕ್ಕೂಟಗಳು ಮುಂದೂಡಿವೆ.

ಮುಂಬೈನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ‘ಸಕಾರಾತ್ಮಕ’ ಬೆಳವಣಿಗೆಗಳು ಕಾಣಿಸಿಕೊಂಡಿರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಎಐಬಿಇಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಸೇರಿ ಈ ಬಂದ್ ಗೆ ಕರೆ ನೀಡಿದ್ದವು. ಬ್ಯಾಂಕಿಂಗ್ ವಲಯದ ನೌಕರರ ಒಕ್ಕೂಟಗಳು ಸೇರಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಎಂದು ಮಾಡಿಕೊಂಡಿವೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಈ ಬಗ್ಗೆ ಹೇಳಿಕೆ ನೀಡಿದೆ.