Tuesday, October 27, 2026

Dasara Wishes

Happy Dasara
Home Front Page ಮೂರು ದಿನ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ ಮುಂದೂಡಿಕೆ

ಮೂರು ದಿನ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ ಮುಂದೂಡಿಕೆ

ಬೆಂಗಳೂರು, ಮಾರ್ಚ್ 01, 2020 (www.justkannada.in): ದೇಶಾದ್ಯಂತ ಮಾರ್ಚ್ 11ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್ ಬಂದ್ ಅನ್ನು ವಿವಿಧ ಒಕ್ಕೂಟಗಳು ಮುಂದೂಡಿವೆ.

ಮುಂಬೈನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ‘ಸಕಾರಾತ್ಮಕ’ ಬೆಳವಣಿಗೆಗಳು ಕಾಣಿಸಿಕೊಂಡಿರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಎಐಬಿಇಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಸೇರಿ ಈ ಬಂದ್ ಗೆ ಕರೆ ನೀಡಿದ್ದವು. ಬ್ಯಾಂಕಿಂಗ್ ವಲಯದ ನೌಕರರ ಒಕ್ಕೂಟಗಳು ಸೇರಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಎಂದು ಮಾಡಿಕೊಂಡಿವೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಈ ಬಗ್ಗೆ ಹೇಳಿಕೆ ನೀಡಿದೆ.