ಕಳಪೆ ಬಿತ್ತನೆ ಬೀಜ: ಉತ್ತಮವಾಗಿ ಕಾಯಿ ಬಾರದಕ್ಕೆ ಮೆಣಸಿಕಕಾಯಿ ಬೆಳೆ ಕಿತ್ತು ಹಾಕಿದ ರೈತರು.

ಮೈಸೂರು,ಜೂ,3,2020(www.justkannada.in): ಕಳೆಪೆ ಬಿತ್ತನೆ ಬೀಜದಿಂದಾಗಿ ಮೆಣಸಿನಕಾಯಿ ಬೆಳೆ ಸರಿಯಾಗಿ ಬಾರದ ಹಿನ್ನೆಲೆ  ಕಂಗಾಲಾದ ರೈತರು ಮೆಣಸಿನಗಿಡವನ್ನ ಕಿತ್ತು ಬಿಸಾಡಿದ್ದಾರೆ.

ಎಚ್ ಡಿ ಕೋಟೆ ತಾಲೂಕಿನ ಎಚ್ ಮಟಕೆರೆ, ಹೈರಿಗೆ ಬೊಪ್ಪನಹಳ್ಳಿ ಸುತ್ತಮುತ್ತ ಹತ್ತಾರು ಎಕರೆಯಲ್ಲಿ  ಪಕ್ಮದ ನರ್ಸರಿಯಲ್ಲಿ ಬಂಗಾರಮ್ಮ ತಳಿಯ ಮೆಣಸಿನ ಕಾಯಿ ಬೀಜ ಖರೀದಿಸಿ ಹಾಕಿದ್ದರು. ಆರ್ಥಿಕ ಸಂಕಷ್ಟದ ನಡುವೆಯೂ ಸಾಲ ಮಾಡಿ ರೈತರು ಮೆಣಸಿನಕಾಯಿ ಬೆಳೆದಿದ್ದರು. ಆದರೆ ಇದೀಗ ಉತ್ತಮವಾಗಿ ಕಾಯಿ ಬಾರದ ಕಾರಣ  ರೈತರು ಕಂಗಾಲಾಗಿದ್ದು ಮೆಣಸಿನ ಕಾಯಿ ಗಿಡವನ್ನ ಕಿತ್ತು ಹಾಕಿದ್ದಾರೆ. Poor -sowing seed –supply- Farmers - pepper –crop-mysore

ಇತ್ತ ಬಜ್ಜಿ ಮೆಣಸಿನಕಾಯಿಯೂ ಅಲ್ಲದ ಖಾರದ ಮೆಣಸಿನಕಾಯಿಯೂ ಅಲ್ಲದ ಮೆಣಸಿನ  ಕಾಯಿ ಬಂದಿದ್ದು ಈ ಮೆಣಸಿನ ಕಾಯಿಯನ್ನ  ಮಾರುಕಟ್ಟೆ ಕೇಳೋರೆ ಇಲ್ಲದಂತಾಗಿದೆ. ಕಳೆದ ಬಾರಿ ಇದೆ ತಳಿ ಬೆಳೆದಿದ್ದವು. ಉತ್ತಮ ಇಳುವರಿ ಬಂದಿತ್ತು.ಬೆಲೆಯು ಸಿಕ್ಕಿತ್ತು. ಆದ್ರೆ ಈಗ ಕಳಪೆ ಭಿತ್ತನೆ ಬೀಜದಿಂದ ಈ ರೀತಿಯಿಂದ ಈಗಾಗಿದೆ ಅಂತಾರೆ ಕೃಷಿಕರು. ಕಳಪೆ ಬಿತ್ತನೆ ಬೀಜ ನೀಡಿದ ಕಂಪನಿ ವಿರುದ್ದ ಕ್ರಮಕ್ಕೆ ರೈತರು  ಆಗ್ರಹಿಸಿದ್ದಾರೆ.

Key words: Poor -sowing seed –supply- Farmers – pepper –crop-mysore