Tuesday, August 4, 2026

BDA Apartments

Home Front Page ಬಡವರು ಬಡವರಾಗಿಯೇ ಉಳಿದಿದ್ದರೇ ಅದಕ್ಕೆ ಕಾಂಗ್ರೆಸ್ ಕಾರಣ- ಬಿವೈ ವಿಜಯೇಂದ್ರ.

ಬಡವರು ಬಡವರಾಗಿಯೇ ಉಳಿದಿದ್ದರೇ ಅದಕ್ಕೆ ಕಾಂಗ್ರೆಸ್ ಕಾರಣ- ಬಿವೈ ವಿಜಯೇಂದ್ರ.

ಹಾಸನ,ಏಪ್ರಿಲ್,15,2024 (www.justkannada.in): ಬಡವರು ಬಡವರಾಗಿಯೇ ಉಳಿದಿದ್ದರೇ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇಂದು ಹಾಸನ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿ ಮಾತನಾಡಿದ ಬಿವೈ ವಿಜಯೇಂದ್ರ,  ಇದು ಎರಡು ಪಕ್ಷಗಳ ನಡುವಿನ ಹೋರಾಟ ಅಲ್ಲ. ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಬೇಕು. ಕಾಂಗ್ರೆಸ್ ನವರು ರಾಜ್ಯದಲ್ಲಿ  ಹೆಚ್ಚಿನ  ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೇ ಏನು ಆಗುವುದಿಲ್ಲ.  ಹಾಗಾಗಿ ಪ್ರಜ್ವಲ್ ರೇವಣ್ಣರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ವಿರುದ್ದ ಗುಡುಗಿದ ಬಿವೈ ವಿಜಯೇಂದ್ರ, ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು..?  ರಾಘವೇಂದ್ರ ಕೊಡುಗೆ ಏನೆಂದು ಜನರಿಗೆ ಗೊತ್ತಿದೆ. ಈಶ್ವರಪ್ಪ ವಿರುದ್ದ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Key words: Poor- people -remain – Congress – BY Vijayendra